ಮೋದಿ ಚೋರ್ ಅಲ್ಲ ಚೌಕಿದಾರ್ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ

| ರಫೆಲ್ ಕುರಿತು ರಾಹುಲ್ ಸುಳ್ಳು ಹೇಳಿಕೆ
ಕೊಪ್ಪಳ:
ಪ್ರಧಾನಿ ಮೋದಿ ಕಪ್ಪು ಹಣ ತಂದು ಬಡವರ ಖಾತೆಗೆ ಹಾಕುತ್ತೇನೆ ಎಂದವರು ಹಾಕಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತವೆ. ಮೋದಿ ಆ ರೀತಿ ಎಲ್ಲೂ ಹೇಳಿಲ್ಲ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರುವಂತೆ ಮಾಡಿದ್ದಾರೆ. ಇದಕ್ಕಾಗಿಯೆ ದೇಶದ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಅಕೌಂಟ್ ಹೊಂದಲು ಜನಧನ್ ಯೋಜನೆ ಜಾರಿಗೆ ತಂದರು ಎಂದು ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದರಾದ ಸಂಗಣ್ಣ ಕರಡಿ

ಹೇಳಿದರು.
ಲೋಕಸಭೆ ಚುನಾವಣೆ ನಿಮಿತ್ತ ಬುಧವಾರದಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಅಳವಂಡಿ, ಕವಲೂರು ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಬ್ಯಾಂಕ್ ಅಕೌಂಟ್ ತೆರೆಸಿದರು. ಬ್ಲಾಕ್ ಮನಿ ತಡೆಗಟ್ಟಲು ಜಿಎಸ್‌ಟಿ ಜಾರಿಗೆ ತಂದರು. ಇದೀಗ ಯಾವುದೇ ಒಂದು ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಇದು ಸಹ ಖಾತೆಗೆ ದುಡ್ಡು ಹಾಕಿದಂತೆ ಅಲ್ಲವೇ? ಆಯುಷ್ಮಾನ್ ಭಾರತ ಯೋಜನೆಯಡಿ ಪ್ರತಿಯೊಬ್ಬ ದೇಶದ ಪ್ರಜಗೆ ೫ ಲಕ್ಷ ನೀಡುತ್ತಿದ್ದಾರೆ. ಒಂದು ಮನೆಯಲ್ಲಿ ೪ ಜನ ಇದ್ದರೆ ಅವರಿಗೆ ೨೦ ಲಕ್ಷ ದೊರೆತಂತೆ, ಪ್ರಧಾನಮಂತ್ರಿ ಜನೌಷಧ ಕೇಂದ್ರದ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುತ್ತಿವೆ. ಪ್ರತಿ ತಿಂಗಳು ಒಂದು ಕುಟುಂಬ ಸರಾಸರಿ ೧೦೦೦ ರೂ. ಔಷಧಿಗೆ ಖರ್ಚು ಮಾಡುತ್ತಿತ್ತು. ಆದರೆ ಇಂದು ಜನೌಷಧಿ ಕೇಂದ್ರದಿಂದ ಅದು ಕೇವಲ ೨೦೦ ರೂ.ಗೆ ಇಳಿದಿದೆ. ಇವೆಲ್ಲ ಯೋಜನೆಗಳ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯ ಹಣ ಉಳಿತಾಯ ಮಾಡಿದ್ದಾರೆ. ಇದು ಪರೋಕ್ಷವಾಗಿ ಖಾತೆಗೆ ದುಡ್ಡು ಹಾಕಿದಂತೆ ಆಗಲಿಲ್ಲವೆ ಎಂಬುದನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಬದಲಾಗಿ ದೇಶದ ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡಬಾರದು ಎಂದು ಹರಿಹಾಯ್ದರು.
ರಫೆಲ್ ಖರೀದಿಯಲ್ಲಿ ಹಗರಣವಾಗಿದೆ ಎಂದು ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಮೋದಿ ಚೋರ್ ಅಲ್ಲ, ಅವರೊಬ್ಬ ದೇಶದ ಚೌಕಿದಾರ್ ಎನ್ನುವುದು ದೇಶವಲ್ಲದೆ ವಿದೇಶಗಳಿಗೂ ಸಹ ಗೊತ್ತಿದೆ. ಅದಕ್ಕಾಗಿಯೇ ಅವರನ್ನು ವಿಶ್ವಮಾನ್ಯ ಅಗ್ರಗಣ್ಯ ನಾಯಕ ಎಂದು ಅರಿತ ದಕ್ಷಿಣಾ ಕೋರಿಯಾ ಸೇರಿದಂತೆ ರಷ್ಟಾ ಸೇರಿ ೭ ದೇಶಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿವೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೋದಿಯವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ರಫೆಲ್ ಡೀಲ್ ಕುರಿತು ಸುಪ್ರಿಂ ಕೋರ್ಟ್ ದಾಖಲೆಗಳ ಪರಿಶೀಲನೆಗೆ ಮರು ವಿಚಾರಣೆ ಅಗತ್ಯ ಎಂದಿದೆ ವಿನಃ ಅದರಲ್ಲಿ ಮೋದಿಯದು ತಪ್ಪಿದೆ ಎಂದು ಹೇಳಿಲ್ಲ. ಆದರೆ ರಾಹುಲ್ ಗಾಂಧಿ ಸುಳ್ಳು ಹೇಳುವ ಮೂಲಕ ತಪ್ಪು ಎಸಗಿದ್ದಾರೆ. ಈ ಕುರಿತು ಮೀನಾಕ್ಷಿ ಲೇಖಿ ದೂರು ದಾಖಲಿಸಿದ್ದಾರೆ. ದೇಶದ ಜನತೆ ಕಾಂಗ್ರೆಸ್‌ನವರ ನಾಟಕವನ್ನು ನೋಡುತ್ತಿದ್ದಾರೆ. ಈ ಚುನಾವಣೆಯಲ್ಲಿ ೧ ಲಕ್ಷ ಮತಗಳ ಅಂತರದಿಂದ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ, ಕೊಪ್ಪಳ ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಸಂಗಣ್ಣ ಕರಡಿಯವರ ಅವಧಿಯಲ್ಲಿ ಅಭಿವೃದ್ಧಿ ಕಂಡಿದೆ. ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಮತದಾರರು ಸಂಗಣ್ಣ ಕರಡಿಯವರಿಗೆ ಮತ್ತೊಂದು ಬಾರಿ ಆಶೀರ್ವದಿಸಿ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಈಶಪ್ಪ ಮಾದಿನೂರ, ಸಂಗಪ್ಪ ವಕ್ಕಳದ, ಭೂಸನೂರುಮಠ ವಕೀಲರು, ಪೀರಾಹುಸೇನ್ ಹೊಸಳ್ಳಿ, ಅಪ್ಪಣ್ಣ ಪದಕಿ, ಹಾಲೇಶ ಕಂದಾರಿ, ವಿರೂಪಾಕ್ಷಯ್ಯ ಗದಗಿನಮಠ, ಮಹಾಂತೇಶ ಪಾಟೀಲ್, ಡಿ. ಮಲ್ಲಣ್ಣ, ಸಂಗಮೇಶ ಡಂಬಳ, ಮಲ್ಲಣ್ಣ ಬೇಲೇರಿ, ಶಂಕರಗೌಡ ಬೆಳಗಟ್ಟಿ, ಸುನಂದಮ್ಮ ಗದ್ದಿಕೇರಿ, ಉಮಾದೇವಿ ಕರ್ಕಿಹಳ್ಳಿ, ನಾಗಪ್ಪ ಸವಡಿ, ಶಂಕ್ರಪ್ಪ ಕಲಾದಗಿ, ವೈಜನಾಥ್ ದಿವಟರ್, ಪ್ರಶಾಂತ್ ರಾಯ್ಕರ್, ಸುರೇಶ್ ದಾಸರೆಡ್ಡಿ, ಶ್ರೀನಿವಾಸ ಕಲಾದಗಿ, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error