ಮೊಬೈಲ್ ಬಳಕೆ ತಡೆಗೆ ಕ್ರಮಕ್ಕೆ ಆಗ್ರಹ

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಮೊಬೈಲ್ ಫೋನ್ ಗಳನ್ನು ಬಳಕೆ ಮಾಡಲು ರಾಜ್ಯ ಸರ್ಕಾರ ನಿಷೇಧ ಹೇರಿದೆ, ಸುತ್ತೊಲೆಯ ಪ್ರತಿ ಸದರಿ ಮನವಿಯೊಂದಿಗೆ ಲಗತ್ತಿಸಲಾಗಿದೆ. ಶಾಲಾ ಅವಧಿಯಲ್ಲಿ ಅನೇಕ ಶಿಕ್ಷಕರು ರಾಜಾರೋಷವಾಗಿ ಮೊಬೈಲ್ ಬಳಸುತ್ತಿದ್ದಾರೆ, ಕ್ರಿಯಾಶೀಲತೆಯ ಹೆಸರಿನಲ್ಲಿ ಅನೇಕರು ಶಾಲಾ ಅವಧಿಯಲ್ಲಿ ಅಪ್ಲೋಡ್, ಕಾಮೆಂಟ್ ಮಾಡುವುದನ್ನು ತಾವು ತಕ್ಷಣವೇ ಗಮನಿಸಬೇಕು. ಶಾಲಾ ಅಭಿವೃದ್ಧಿ ವಿಷಯಕ್ಕೆ ಬಳಸುವ ಆಲೋಚನೆ ಒಳ್ಳೆಯದು ಅದರೆ ಅದರ ದುರುಪಯೋಗ ಹೆಚ್ಚಾಗಿದೆ, ಇನ್ನೂ ಕೆಲ ಶಿಕ್ಷಕರು ಗೇಮ್‌ಗಳಿಗೆ ದಾಸರಾಗಿದ್ದಾರೆ, ಅಂತಹ ಶಿಕ್ಷಕರಿಗೆ ಮಾನಸಿಕ ತಜ್ಞರಿಂದ ಮಾಸ ಕೌನ್ಸಿಲಿಂಗ್ ಅವಶ್ಯಕತೆ ಇದ್ದು ಈ ಕುರಿತು ಕಾರ್ಯಾಗಾರ ಏರ್ಪಡಿಸಬೇಕೆಂದು ನ್ಯಾಯವಾದಿ ವಿಜಯ ಅಮೃತರಾಜ ಆಗ್ರಹಿಸಿದ್ದಾರೆ.

Please follow and like us:
error