fbpx

ಮೈ ಡ್ಯಾಡಿ ಈಸ್ ಸ್ಟ್ರಾಂಗೆಸ್ಟ್!

ಕನ್ನಡನೆಟ್ ನ್ಯೂಸ್

ಹತ್ತನೇ ತರಗತಿ ವಿದ್ಯಾರ್ಥಿನಿ ರೋಶಿಣಿ ಭಡೋರಿಯಾ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಮೆಹಗಾಂವ್ ಗ್ರಾಮದ ಪುರುಷೋತ್ತಮ ಭಡೋರಿಯಾ ಎಂಬ ಬಡ ರೈತನೊಬ್ಬನ ಮಗಳು. ಇವಳು ಕಲಿಯುತ್ತಿರುವ ಸರ್ಕಾರಿ ಶಾಲೆ ಮನೆಯಿಂದ 24 ಕಿಮಿ ದೂರದಲ್ಲಿದೆ. ಪ್ರಯಾಣಕ್ಕೆ ಬೇರೆ ವಾಹನಗಳ ಸೌಕರ್ಯ ಇಲ್ಲದ ಕಾರಣ ರೋಶಿಣಿ ದಿನಾ ಅಷ್ಟು ದೂರ ರಾಜ್ಯ ಸರ್ಕಾರ ಕೊಟ್ಟ ಸೈಕಲ್ ತುಳಿದು ಹೋಗಿ ಬರಬೇಕು. ಇಂಥಹ ಕಷ್ಟದ ಸನ್ನಿವೇಶದಲ್ಲೂ ರೋಶಿಣಿ ಈ ಬಾರಿಯ SSLC ಪರೀಕ್ಷೆಯಲ್ಲಿ 98.75% ಮಾರ್ಕುಗಳನ್ನು ಪಡೆಯುವಲ್ಲಿ ಸಫಲಳಾದಳು!

ಮಾಧ್ಯಮಗಳಲ್ಲಿ ಈಕೆಯ ಸಾಹಸದ ಸುದ್ದಿ ವರದಿಯಾಗಿ ಇವಳ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಡಲು ರಾಜ್ಯ ಸರ್ಕಾರವೂ ಸೇರಿ ದೇಶದ ಆನೇಕ ಕಡೆಗಳಿಂದ ಸಹೃದಯಿಗಳು ಹಣ ಸಹಾಯ ಮಾಡಲು ಮುಂದೆ ಬಂದರು. ಆದರೆ, ಪುರುಷೋತ್ತಮ ಭಡೋರಿಯಾ ಈ ಸಹಾಯವನ್ನು ಸ್ವೀಕರಿಸಲು ನಿರಾಕರಿಸಿ ವಿನೀತನಾಗಿ ಹೇಳಿದ್ದೇನು ಗೊತ್ತೇ?
“ನಾನೊಬ್ಬ ರೈತ. ನನಗೆ ಗಿಡವೊಂದನ್ನು ಹೇಗೆ ಬೆಳೆಸಬೇಕು ಎಂಬುವುದು ಗೊತ್ತಿದೆ. ನನ್ನ ಮಕ್ಕಳು ತಮ್ಮ ಬದುಕಿನಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಆದರೆ, ನಾನೀವತ್ತು ನಿಮ್ಮ ಸಹಾಯವನ್ನು ಸ್ವೀಕರಿಸಿದರೆ ಮುಂದೆ ನಾನು ಅವರಿಗೆ ಈ ಸ್ವಾಭಿಮಾನದ ಪಾಠವನ್ನು ಕಲಿಸುವ ಸ್ಥಿತಿಯಲ್ಲಿರುವುದಿಲ್ಲ. ನೀವೆಲ್ಲರೂ ಸಹೃದಯಿಗಳು. ನಿಮ್ಮ ಕಳಕಳಿಗೆ ನಾನು ಕೃತಜ್ಞನಾಗಿದ್ದೇನೆ. ಮುಂದೆ ನಾನು ನಿಮ್ಮೆಲ್ಲರ ಸಂಪರ್ಕದಲ್ಲಿರುತ್ತೇನೆ” ಎಂದು ಹೇಳಿ ರೈತನೆಂದರೆ ಕೊಡುವವನೇ ಹೊರತು ಪಡೆಯುವವನಲ್ಲ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ. ಆದರೆ, ಅವರು ಸರ್ಕಾರದ ಸಹಾಯವನ್ನು ನಿರಾಕರಿಸದಿರುವ ಜಾಣ್ಮೆಯನ್ನು ತೋರಿದ್ದಾರೆ. ಹಾಗೂ, ಅಗತ್ಯ ಬಿದ್ದರೆ ಎಜುಕೇಶನ್ ಲೋನ್ ಪಡೆಯುವುದಾಗಿ ಹೇಳುತ್ತಾರೆ.- 

– Panju Gangolli

Please follow and like us:
error
error: Content is protected !!