ಮೂರು ವರ್ಷಗಳಾದರೂ ಪರಿಸ್ಥಿತಿ ಬದಲಾಗಿಲ್ಲ  : ತಳ್ಳುವ ಗಾಡಿಯಲ್ಲೇ ತಾಯಿಯನ್ನ ಆಸ್ಪತ್ರೆಗೆ ಕರೆ ತಂದ ಪುತ್ರ

ಕೊಪ್ಪಳ: ಆಕೆಗೆ ಮಗನೇ ಆಸರೆ. ಅವನಿಗೆ ತಾಯಿಯೇ ಸರ್ವಸ್ವ. ಕಳೆದ ಮೂರು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯನ್ನ ತಳ್ಳುವ ಗಾಡಿಯಲ್ಲೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾನೆ. ಇದಕ್ಕೆ ತಾಯಿಗ ವಾಸವಾಗಿರುವ ಹಳ್ಳಿಗೆ ಬಸ್ ಸಂಪರ್ಕವೇ ಇಲ್ಲ. ರಸ್ತೆಯೂ ಸರಿ ಇಲ್ಲ. ಖಾಸಗಿ ವಾಹನಗಳ ಓಡಾಟವೂ ತೀರಾ ಅಪರೂಪ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಂಜನಕೊಪ್ಪ ಗ್ರಾಮದ ಹನುಮಂತಪ್ಪ ಅನಾರೋಗ್ಯ ಪೀಡಿತ ತಾಯಿಯನ್ನು ತಳ್ಳುವ ಗಾಡಿಯಲ್ಲಿ ಮೂರು ಕಿ.ಮೀ. ದೂರದ ಚಲಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾನೆ.

ಕಳೆದ ಮೂರು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಮೂರು ವರ್ಷಗಳಾದರೂ ಪರಿಸ್ಥಿತಿ ಬದಲಾಗಿಲ್ಲ. ಗ್ರಾಮಕ್ಕೆ ಬಸ್ ಸೌಕರ್ಯವೂ ಇಲ್ಲ ಅಂತ ಹೇಳ್ತಾನೆ ಹನುಮಂತಪ್ಪ

Please follow and like us:
error