ಮುಸ್ಲಿಂ ಧರ್ಮ ಗುರು, ಜನಾಬ ಅಬ್ದುಲ್ ರಹೀಮಸಾಬ ಪೇಷ ಇಮಾಮ ನಿಧನ

ಕುಕನೂರಿನ ಜನಾಬರು ಎಂತಲೇ ಜಿಲ್ಲೆಯಾದ್ಯಂತ ಚಿರಪರಿಚಿತರಾಗಿದ್ದ ಮುಸ್ಲಿಂ ಸಮಾಜದ ಧರ್ಮಗುರು ಜನಾಬ ಅಬ್ದುಲ್ ರಹೀಮಸಾಬ ಪೇಷ ಇಮಾಮಸಾಬ (73)ಇವರು ದಿ 17  ರಂದು ಬೆಳಗಿನ ಜಾವ 6,25 ಕ್ಕೆ
ಹರಿಹರದಲ್ಲಿ ವಯೋಸಹಜವಾಗಿ ಸ್ವರ್ಗಸ್ಥರಾಗಿದ್ದಾರೆ. ಮೃತರು ಅಸದ್ ಖಾಜಿ ಅವರ ಚಿಕ್ಕಪ್ಪರಾಗಿದ್ದಾರೆ.
ಮೃತರು ಅಪಾರ ಬಂಧು ಬಳಗ ಹಾಗೂ ಅಸಂಖ್ಯಾತ ಶಿಷ್ಯ ಬಳಗವನ್ನು ಅಗಲಿದ್ದಾರೆ.

ಕಳೆದ 30 ವರ್ಷದಿಂದಲೂ ಹರಿಹರದ ಪ್ರತಿಷ್ಠಿತ ಮಸೀದಿಯಲ್ಲಿ ಪೇಷ ಇಮಾಮಸಾಬರಾಗಿ ದೈವ ಕಾರ್ಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು, ನಿಸ್ವಾರ್ಥ ಭಾವದಿಂದ ಸಮರ್ಪಿಸಿಕೊಂಡಿದ್ದರು.
ಕಳೆದ 40 ವರ್ಷಗಳದೆ ರಷೀದ ಅಹ್ಮದ್ ಹಣಜಗಿರಿ, ಅಸದ್ ಖಾಜಿ, ಅಮ್ಜದ್ ಖಾಜಿ ಸೇರಿದಂತೆ ಎಲ್ಲ ಮುಸ್ಲಿಂ ಸಮಾನ ಮನಸ್ಕರಿಗೂ ರೋಜಾ, ನಮಾಜು, ಕಲ್ಮೆ, ಸೂರ್ಹಾ, ದೀನೆ ತಾಲೀಮು ಕಳಿಸಿಕೊಟ್ಟವರು,ಇತರೆ ಸಮಾಜದವರೊಂದಿಗೆ ಬಾಂಧವ್ಯದಿಂದ ಬದುಕಲು ದಾರಿ ದೀಪವಾದವರು. ಅಲ್ಹಾತಾಲಾನ ಕರುಣೆ, ಪ್ರೀತಿ, ಸೌಹಾರ್ದತೆ ಮತ್ತು ಮನುಷ್ಯ ಧರ್ಮದ ನೈತಿಕತೆಯನ್ನು ಬೋಧಿಸಿದ ಮಹಾನ್ ಗುರುಗಳು ¦
ಮುಖದಲ್ಲಿ ತೇಜಸ್ಸು, ಕಣ್ಣುಗಳಲ್ಲಿಯ ಕರುಣೆಯ ಕಾಂತಿ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾಂಕೇತಿಸುತಿದ್ದವು¦
ಕೇವಲ ಮುಸ್ಲಿಂರಿಗಷ್ಟೇ ಅಲ್ಲ ಹಿಂದೂ ಬಾಂಧವರೂ ಅವರ ಸಂಕಷ್ಟ ಹೇಳಿಕೊಂಡು ಗುರುಗಳ ಹತ್ತಿರ ಬಂದರೆ ಪರಿಹಾರ ಸೂಚಿಸಿ, ಸಾಂತ್ವನದ ಮಾತು ಹೇಳಿ ಕಳುಹಿಸುತಿದ್ದರು ಇವರ ಬಾಯಿಯಿಂದ ಒಂದು ಮಾತು ಬಂದರೆ ಸಾಕು ಅದು ದೈವ ವಾಣಿ ಎಂದು ಭಾವಿಸಲಾಗುತಿತ್ತು ಬದಲಾಗಿ ಗುರುಗಳು ಯಾರೊಂದಿಗೂ ಏನೊಂದೂ ನಿರೀಕ್ಷಿಸಿದವರಲ್ಲ¦ಅಷ್ಟೊಂದು ನಿಷ್ಕಲ್ಮಷ ಹೃದಯದವರಾಗಿದ್ದರು ಮೃತರ ಅಂತ್ಯಕ್ರಿಯೆ ಹರಿಹರದಲ್ಲಿ ರಾತ್ರಿ 9 ಘಂಟೆಗೆ ಜರುಗಲಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ದಯಾಮಯನಾದ ಭಗವಂತನನ್ನು ಪ್ರಾರ್ಥಿಸುವೆ.

Please follow and like us:
error