ಮುನಿರಾಬಾದ್ ಸರಕಾರಿ ಪ್ರೌಢ ಶಾಲೆ SDMC ಆಯ್ಕೆ

ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಪಣ ತೊಡಿ- ಬಾಲಚಂದ್ರನ್

ಕೊಪ್ಪಳ :ಜಿಲ್ಲೆಯ ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ SDMC ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು…
ನೂತನ ಅಧ್ಯಕ್ಷರಾಗಿ ರಮೇಶ್ ರವರನ್ನು ಆಯ್ಕೆ ಮಾಡಲಾಯಿತು. ಕೊಪ್ಪಳ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಗೌಸ್ ರವರ, ಕೊಪ್ಪಳ ತಾಲೂಕ ಪಂಚಾಯತ್ ಅಧ್ಯಕ್ಷರಾದ ಬಾಲಚಂದ್ರನ್ ರವರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕಮಲಾ ಇಸ್ರೇಲ್ ರವರ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಾಳೆಪ್ಪ ರವರ, ಗ್ರಾಮ ಪಂಚಾಯತ್ ಸರ್ವ ಸದಸ್ಯರ , ಮತ್ತು ಗ್ರಾಮದ ಹಿರಿಯರ ಮುಂದಾಳತ್ವದಲ್ಲಿ ನೆರವೇರಿತು..
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಪ್ಪಳ ತಾಲೂಕ ಪಂಚಾಯತ್ ಅಧ್ಯಕ್ಷರಾದ ಬಾಲಚಂದ್ರನ್ ಸರ್ ರವರು ನೂತನ SDMC ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ರವರಿಗೆ ಮತ್ತು ನೂತನ SDMC ಸದಸ್ಯರಿಗೆ ಅಭಿನಂದನೆಯನ್ನು ತಿಳಿಸಿ ಈ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಪಣ ತೊಡಬೇಕು ಮತ್ತು ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ವನ್ನು ಶಾಲೆಯ ಶಿಕ್ಷಕ ರೊಂದಿಗೆ ನಿಕಟ ಸಂಬಂದ ದೊಂದಿಗೆ ಅಭಿವೃದ್ಧಿ ಮಾಡಬೇಕು ನಿಮಗೆ ಎಲ್ಲಾ ಸದಸ್ಯರ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು…
ಆಯ್ಕೆಯ ಪ್ರಕ್ರಿಯೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಶಾಲಾ ಮಕ್ಕಳ ಪಾಲಕರು, ಗ್ರಾಮದ ಗುರು ಹಿರಿಯರು , ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು …

Please follow and like us:
error