ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಹಣಕಾಸಿನ ಬಗ್ಗೆ ಜ್ಞಾನವಿಲ್ಲ: ಸಿದ್ದರಾಮಯ್ಯ

ಮಂಗಳೂರು  : ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಹಣಕಾಸಿನ ಬಗ್ಗೆ ಜ್ಞಾನವೇ ಇಲ್ಲ. ಇದ್ದಿದ್ದರೆ ಖಜಾನೆ ಖಾಲಿಯಾಗಿದೆ ಎಂಬರ್ಥದಲ್ಲಿ‌ ಮಾತನಾಡುತ್ತಿರಲಿಲ್ಲ ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳೂರಿಗೆ ಶನಿವಾರ ಬೆಳಗ್ಗೆ ಆಗಮಿಸಿರುವ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಾ, ಖಜಾನೆ ಯಾವತ್ತೂ ತುಂಬಿರುವುದಿಲ್ಲ. ತೆರಿಗೆ ಬಂದ ಹಾಗೆ ಅಗತ್ಯ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತದೆ ಎಂದರು.

ರಾಜ್ಯವು 38 ಸಾವಿರ ಕೋ.ರೂ. ಕೇಳಿದರೂ ಕೇಂದ್ರ ಸರಕಾರ ಎರಡು ತಿಂಗಳ‌ ಬಳಿಕ ಕೇವಲ‌1,200 ಕೋ.ರೂ.ನೀಡಿದೆ. ಈ ಹಣ ತುರ್ತು ನಿರ್ವಹಣೆಗೆ ಸಾಲದು. ಕನಿಷ್ಠ 5 ಸಾವಿರ ಕೋ.ರೂ. ನೀಡಬೇಕಿತ್ತು. ಇಷ್ಟು ಕಡಿಮೆ ಹಣ ಬಿಡುಗಡೆಗೆ ರಾಜ್ಯ ಸರಕಾರದ ವೈಫಲ್ಯವೇ ಕಾರಣ. ರಾಜ್ಯ ಸರಕಾರ ಕೇಂದ್ರದ ಮೇಲೆ ಸಕಾಲಕ್ಕೆ ಒತ್ತಡ ಹಾಕಿದ್ದರೆ‌  ಹೀಗಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರಕಾರದ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಾಗುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ‌‌ ಮೋದಿಯು‌ ಹಿಟ್ಲರ್ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂದು ಟೀಕಿಸಿದರು.

Please follow and like us:
error