ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 24 ಗಂಟೆಯೊಳಗೆ ಮಾಹಿತಿ ನೀಡುತ್ತೀರಾ? – ಸಿದ್ದರಾಮಯ್ಯ

 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಾಗಿ ಹೇಳಿರುವುದು ಕೇಳಿ ಅಚ್ಚರಿಯಾಯಿತು. ಮಾಹಿತಿ ಕೇಳಿ ನಾನು ಬರೆದ ಕೊನೆಯ ಪತ್ರ ಈ ತಿಂಗಳ ಹತ್ತರಂದು ನಿಮ್ಮ ಕಚೇರಿ ತಲುಪಿದೆ. ಇನ್ನು ಯಾವ ರೀತಿ ಮಾಹಿತಿ ಕೇಳಲಿ? ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿ ಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಭಾಷಣದಲ್ಲಿ ಎಲ್ಲ ಮಾಹಿತಿ ನೀಡಲು ಸಿದ್ದ ಎಂದು ಹೇಳಿಕೆ ನೀಡಿದ ಬಳಿಕ ಈ ಪ್ರಶ್ನೆಯನ್ನು ಕೇಳಿದ್ದಾರೆ.

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳನ್ನು ಯಾವ ಯಾವ ಇಲಾಖೆಗಳ ಮೂಲಕ ಖರೀದಿ ಮಾಡಲಾಗಿದೆ? ಅವುಗಳನ್ನು ಎಲ್ಲೆಲ್ಲಿ ಬಳಕೆ ಮಾಡಲಾಗಿದೆ? ಮಾಡಿರುವ ವೆಚ್ಚ ಎಷ್ಟು? ಇದಕ್ಕೆ ಟೆಂಡರ್ ಕರೆಯಲಾಗಿದೆಯೇ? ಕೊಟೇಷನ್ ಪಡೆಯಲಾಗಿದೆಯೇ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ 24 ಗಂಟೆಯೊಳಗೆ ಈ ಮಾಹಿತಿ ನೀಡಬಹುದೇ? ಎಂದು ಪ್ರಶ್ನೆ ಮಾಡಿದ್ಧಾರೆ.

Please follow and like us:
error