ಮುಂಬೈ ಪೊಲೀಸರ ಮುಂದೆ ಹಾಜರಾದ ಪತ್ರಕರ್ತ ಅರ್ನಬ್ ಗೋಸ್ವಾಮಿ

ಮುಂಬೈ, ಎ.27 ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಾನಹಾನಿ  ಹೇಳಿಕೆ ನೀಡಿರುವ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಪೊಲೀಸರ ಮುಂದೆ ಹಾಜರಾಗಿದ್ದಾರೆ

“ಮುಂಬೈ ಪೊಲೀಸರು ಕಳೆದ 12 ಗಂಟೆಗಳಲ್ಲಿ ನನಗೆ ಎರಡು ನೋಟಿಸ್ ಕಳುಹಿಸಿದ್ದಾರೆ. ಸೋನಿಯಾ ಗಾಂಧಿ ಬಗ್ಗೆ ನನ್ನ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ನೋಟಿಸ್ ಕಳುಹಿಸಲಾಗಿದೆ. ಕಾನೂನು ಪಾಲಿಸುವ ಪ್ರಜೆಯಾಗಿ ನಾನು ತನಿಖೆಗೆ ಸಹಕರಿಸುತ್ತೇನೆ” ಎಂದು ಗೋಸ್ವಾಮಿ ರವಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗೋಸ್ವಾಮಿ ಅವರ ವಿರುದ್ಧ ದ್ವೇಷದ ಮಾತುಗಳ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಬದಿಗಿಟ್ಟ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಸಲ್ಲಿಸಲಾದ ಎಫ್‌ಐಆರ್‌ಗಳಲ್ಲಿ ಒಂದನ್ನು ತನಿಖೆ ನಡೆಸಲು ನ್ಯಾಯಾಲಯವು ಮಹಾರಾಷ್ಟ್ರ ಪೊಲೀಸರಿಗೆ ಅನುಮತಿ ನೀಡಿತು, ಆದರೆ ಆರು ರಾಜ್ಯಗಳಲ್ಲಿ ಅವರ ವಿರುದ್ಧ ದಾಖಲಾದ ಇತರ ಎಫ್‌ಐಆರ್‌ಗಳನ್ನು ತಡೆಹಿಡಿದಿದೆ.

ಕಾಂಗ್ರೆಸ್ ಸಚಿವ ನಿತಿನ್ ರೌತ್ ಆರಂಭದಲ್ಲಿ ನಾಗ್ಪುರದಲ್ಲಿ ಮೊದಲ ದೂರು ಸಲ್ಲಿಸಿದ್ದರು.  ಆದರೆ ಸುಪ್ರೀಂ ಕೋರ್ಟ್ ಈ ವಿಷಯವನ್ನು ಮುಂಬೈಗೆ ವರ್ಗಾಯಿಸಿತು. ಮುಂದಿನ ಮೂರು ವಾರಗಳವರೆಗೆ ಗೋಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ, ಆದ್ದರಿಂದ ಅವರು ಜಾಮೀನಿಗೆ ಅರ್ಜಿ ಸಲ್ಲಿಸಲು ಸಮಯವಿದೆ.

ಗೋಸ್ವಾಮಿ “ಅಸಭ್ಯ ಭಾಷೆ” ಯನ್ನು ಬಳಸಿಕೊಂಡು ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಯಾರೊಬ್ಬರ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವುದು ಸ್ವೀಕಾರಾರ್ಹವಲ್ಲ. ಗೋಸ್ವಾಮಿ ಅವರು ಗಾಂಧಿಯನ್ನು ಅವಮಾನಿಸಲು ಪ್ರಯತ್ನಿಸಿದರು” ಎಂದು ನಿತಿನ್ ರೌತ್ ಆರೋಪಿಸಿದ್ದಾರೆ

Please follow and like us:
error