ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಪ್ರತಿಭಟನೆ

ಕೊಪ್ಪಳ : ವಾಲ್ಮೀಕಿ ಸಮುದಾಯಕ್ಕೆ ಅನುಕೂಲವಾಗುವಂತೆ ರಾಜ್ಯ ಸರಕಾರ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಕಾರಟಗಿ ತಾಲೂಕು ಘಟಕದಿಂದ ಜಿಲ್ಲೆಯ ಕಾರಟಗಿ ಪಟ್ಟಣದ ಪುರಸಭೆ ಕಾರ್ಯಾಲದಿಂದ ತೆರಳಿ ಕನಕದಾಸ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡುವ ಮೂಲಕ ಉಪ ತಹಶೀಲ್ದಾರ್ ಬಾಲಚಂದ್ರರವರಿಗೆ ಮನವಿ ಸಲ್ಲಿಸಿದರು.
ವಾಲ್ಮೀಕಿ ಸಮಾಜದ ಮುಖಂಡರಾದ ನಾಗರಾಜ್ ಬಿಲ್ಗಾರ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸುಮಾರು ೭೦ ರಿಂದ ೭೫ ಲಕ್ಷ ಜನಸಂಖ್ಯೆ ಇರುವ ದೊಡ್ಡ ಸಮುದಾಯ ನಮ್ಮದಾಗಿದ್ದು, ೧೭ ಎಂ.ಎಲ್.ಎ, ಹಾಗೂ ೨ ಸಂಸದರನ್ನು ಹೊಂದಿದ್ದು, ಈ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಶೇ ೭.೫ ಮಿಸಲಾತಿ ಇದುವರೆಗೂ ನೀಡಿಲ್ಲ, ಸಮಾಜದ ಶ್ರೀ ಗಳು ಸಾಕಷ್ಟು ಬಾರಿ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿದರು ಸಹ ಸರ್ಕಾರವು ಯಾವುದೇ ತಿರ್ಮಾನ ತಗೆದುಕೊಂಡಿಲ್ಲ, ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸೆ.೨೧ ರಂದು ನೆಡೆಯುವ ಅಧಿವೇಶನದೊಳಗೆ ನಮ್ಮ ಸಮಾಜಕ್ಕೆ ನ್ಯಾಯಯುತವಾದ ಬೇಡಿಕೆಯನ್ನು ಈಡೇಸಬೇಕು ಇಲ್ಲಾವಾದಲ್ಲಿ, ಮುಂದಿನ ದಿನಗಳಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ನಮ್ಮ ಸಮುದಾಯ ತಕ್ಕ ಪಾಠವನ್ನು ಕಲಿಸುತ್ತದೆ ಎಂದರು,
ಅಂಬಣ್ಣ ನಾಯಕ ಮಾತನಾಡಿ ಸಮಾಜಕ್ಕೆ ಸರಿಯಾಗಿ ಮೀಸಲಾತಿ ದೊರೆಯದೆ ವಿದ್ಯಾರ್ಥಿಗಳು ನಿರುದ್ಯೋಗದ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ, ಕೂಡಲೇ ರಾಜ್ಯ ಸರ್ಕಾರ ನಿವೃತ್ತ ನ್ಯಾ. ನಾಗಮೋಹನದಾಸ್ ರವರ ವರದಿಯಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಶೇ೭.೫ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಹುಡೇದ್ ಶಿವಣ್ಣ ಚಳ್ಳೂರು, ಕಂಟೇಪ್ಪ ತೊಂಡಿಹಾಳ್,ಗದ್ದೇಪ್ಪ ನಾಯಕ, ಶಿವರೆಡ್ಡಿನಾಯಕ ವಕೀಲರು, ರಮೇಶ್ ನಾಡಿಗೇರ್, ಪ್ರಭುರಾಜ್ ಬೂದಿ, ಯಮನೂರಪ್ಪ ಬೂಪೂರ್, ದುರಗೇಶ್ ಪ್ಯಾಟ್ಯಾಳ್, ಗವಿಸಿದ್ದಪ್ಪ ಉಳೇನೂರು, ಬಸವರಾಜ್ ಬೂದಿ, ವೀರೇಶ್ ಮೈಲಾಪೂರ್, ಪಂಪಾಪತಿ ಕರಡೋಣಾ, ಆನಂದ ಸಿದ್ದಾಪುರ, ಲಿಂಗರಾಜ್ ನಾಯಕ್, ಬಸವರಾಜ್ ನಾಯಕ್, ಸೇರಿದಂತೆ ಇತರರಿದ್ದರು.

Please follow and like us:
error