ಮಾ. ೧೦ ರಂದು ”ರಾಷ್ಟ್ರೀಯ ಪಲ್ಸ್ ಪೊಲಿಯೋ”


ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಿ ಕಡ್ಡಾಯ : ಆರ್.ಎಸ್. ಪೆದ್ದಪ್ಪಯ್ಯ
ಕೊಪ್ಪಳ ಮಾ.  : ಮಾ. ೧೦ ರಂದು ”ರಾಷ್ಟ್ರೀಯ ಪಲ್ಸ್ ಪೊಲಿಯೊ” ಅಂಗವಾಗಿ ಜಿಲ್ಲೆಯ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೊಲಿಯೋ ಲಸಿಕೆಯನ್ನು ಹಾಕಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾ. ೧೦ ರಂದು ನಡೆಯುವ ”ರಾಷ್ಟ್ರೀಯ ಪಲ್ಸ್ ಪೊಲಿಯೊ” ಕಾರ್ಯಕ್ರಮದ ಜಿ.ಪಂ. ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಮಂಗಳವಾರದಂದು ನಡೆದ ಜಿಲ್ಲಾ ಮಟ್ಟದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪೊಲಿಯೋ ಲಿಸಿಕೆ ಅತ್ಯವಶ್ಯಕವಾಗಿದ್ದು, ”ರಾಷ್ಟ್ರೀಯ ಪಲ್ಸ್ ಪೊಲಿಯೊ” ಅಂಗವಾಗಿ ಜಿಲ್ಲೆಯಲ್ಲಿರುವ ೦ ರಿಂದ ೦೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಹಾಕಿಸಬೇಕು. ಈ ಕುರಿತು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಾರ್ಥನೆಯ ಸಮಯದಲ್ಲಿ ಘೋಷಣೆ ಕೂಗುವುದು, ಜನ ಜಾಗೃತಿ ಜಾಥಾ ಕಾರ್ಯ ಕೈಗೂಳ್ಳಬೇಕು. ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಂದ ಲಸಿಕೆ ಕೇಂದ್ರಕ್ಕೆ ಮಕ್ಕಳನ್ನು ಕರೆತರುವಂತಹ ಕಾರ್ಯವಾಗಬೇಕು. ಮಹಿಳಾ ಮತ್ತು ಮಕ್ಕಳ ಕೇಂದ್ರ ಇಲಾಖೆಯಿಂದ ಲಸಿಕಾ ದಿನದಂದು ಅಂಗನವಾಡಿ ಕೇಂದ್ರ ತೆರೆಯುವುದು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಹೇಳಿದರು.
ಬಳ್ಳಾರಿ ಎಸ್.ಎಂ.ಓ ಡಾ. ಶ್ರೀಧರ ಅವರು ಮಾತನಾಡಿ, ಭಾರತದ ಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ, ಅಪಘಾನಿಸ್ತಾನ & ನೈಜೀರಿಯಾಗಳಲ್ಲಿ ಪೋಲಿಯೊ ಪ್ರಕರಣ ಇರುವುದರಿಂದ ಮುಂಜಾಗೃತಿಗಾಗಿ ನಮ್ಮ ದೇಶದಲ್ಲಿ ಈ ಪೋಲಿಯೊ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಬಾರಿ ಒಂದೇ ಸುತ್ತು ಇದ್ದು, ಈ ಕಾರ್ಯಕ್ರಮವು ೨೦೧೯ ರಿಂದ ೨೦೨೩ ರವರೆಗೆ ಮುಂದುವರೆಲಿದೆ. ಲಸಿಕೆ ಕೂಡ ಬದಲಾವಣೆಯಾಗಿದೆ. ೨೦೧೧ ರಿಂದ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿರುವುದಿಲ್ಲ. ಕಣ್ಣಗಾವಲು ಸಮಿತಿಯಿಂದ ಕಾರ್ಯಕ್ರಮದ ನಂತರ ಸಮೀಕ್ಷೆ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಸಮಸ್ಯೆತ್ಮಾಕ ಪ್ರದೇಶಗಳಾದ ವಲಸೆ ಜನಾಂಗ, ಇಟ್ಟಿಂಗಿ ಬಟ್ಟಿ, ಕಟ್ಟಡ ಕಾರ್ಮಿಕರ, ಕಬ್ಬು ಕಡೆಯುವ ಜನಾಂಗದ ೦-೫ ವರ್ಷ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ಇಂದ್ರದನುಷ್ ಅಭಿಯಾನ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ಮಾತನಾಡಿ, ಜಿಲ್ಲೆಯ ೦-೫ ವರ್ಷ ಮಕ್ಕಳ ಸಂಖ್ಯೆ ೧.೮೨.೪೧೭, ಎಲ್ಲಾ ಮಕ್ಕಳಿಗೆ ಪೋಲಿಯೋ ಹಾಕುವ ಗುರಿ ಹೊಂದಿದೆ. ಎಲ್ಲಾ ಮಕ್ಕಳಿಗೂ ಮೊದಲನೆ ದಿನದಲ್ಲಿ ಲಸಿಕೆ ಕೇಂದ್ರದಲ್ಲಿ ೧೦೦ ಕ್ಕೆ ೯೫ ರಷ್ಟು ಪ್ರಗತಿ ಸಾಧಿಸುವಂತೆ ಎಲ್ಲಾ ಇಲಾಖೆಗಳು ಸಹಕರಿಸಬೇಕು. ೧೮ ಮೊಬೈಲ್ ತಂಡ, ೪೭ ಟ್ರಾನಜೆಂಟ್ ತಂಡ, ೮೬೮ ಲಸಿಕಾ ಕೇಂದ್ರಗಳು ಒಟ್ಟು ಜಿಲ್ಲೆಯಲ್ಲಿ ೯೩೩ ತಂಡಗಳು ಕಾರ್ಯನಿರ್ವಹಿಸಲಿವೆ. ಜೈಸ್ಕಾಂ ಇಲಾಖೆಯಿಂದ ಈ ಕಾರ್ಯಕ್ರಮದ ಅವಧಿಯಲ್ಲಿ ನಿರಂತರ ವಿದ್ಯುತ್ ನೀಡಬೇಕು. ಪ್ರದೇಶಕ ಸಾರಿಗೆ ಇಲಾಖೆಯಿಂದ ವಾಹನ ವ್ಯವಸ್ಥೆ ಮಾಡಿ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಬಿ ದಾನರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎಸ್.ಕೆ ದೇಸಾಯಿ, ರೋಟರಿ ಕ್ಲಬ್‌ನ ಡಾ. ರಾಧ ಕುಲಕರ್ಣಿ ಸೇರಿದಂತೆ ನಾಲ್ಕು ತಾಲೂಕಾ ಆರೋಗ್ಯಾಧಿಕಾರಿಗಳು, ತಾಲೂಕಾ ಶಿಶು ಅಬಿವೃಧ್ದಿ ಯೋಜನಾ ಅಧಿಕಾರಿಗಳು, ಶಿಕ್ಷಣ, ಜೆಸ್ಕಾಂ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಕೊಪ್ಪಳ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು, ಇತರೆ ಇಲಾಖೆಯ ಅಧಿಕಾರಿಗಳು & ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು.

Please follow and like us:
error