ಮಾಸ್ಕ್ ಧರಿಸದ ಬೈಕ್ ಸವಾರರಿಂದ  ದಂಡ ವಸೂಲಿ

ಕೊಪ್ಪಳ : ಮಾಸ್ಕ್ ಧರಿಸದ ಬೈಕ್ ಸವಾರರಿಗೆ ದಂಡ ಹಾಕುವ ಮೂಲಕ ಜಿಲ್ಲಾಡಳಿತ ಕರೋನಾ ಸೋಂಕು ಹರಡುವದನ್ನು ತಡೆಗಟ್ಟಲು ಮುಂದಾಗಿವೆ. ಕಲ್ಯಾಣ ಕರ್ನಾಟಕದಲ್ಲಿಯೇ ಅತೀ ಹೆಚ್ಚು

ಪ್ರಕರಣಗಳು ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲಾಧಿಕಾರಿಯವರು ದಂಡ ಹಾಕುವ ಮೂಲಕ ನಿಯಂತ್ರಣಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ನಗರಗಳ ಪ್ರಮುಖ ರಸ್ತೆಗಳಲ್ಲಿ ದಂಡ ಹಾಕಿ ಮಾಸ್ಕ್ ಧರಿಸಿ ಓಡಾಡಿ ಎಂದು ಎಚ್ಚರಿಕೆ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿರುವದರಿಂದ ಇದನ್ನು ತಡೆಗಟ್ಟಲು ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಿನ್ನೆಯಿಂದ ಕೊಪ್ಪಳ, ಗಂಗಾವತಿಯ ಪ್ರಮುಖ ರಸ್ತೆಗಳಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ. ಮಾಸ್ಕ್ ಧರಿಸದ ಸವಾರರಿಗೆ 200 ದಂಡ ವಿಧಿಸಿ ಮಾಸ್ಕ್ ಧರಿಸಿಕೊಂಡು ಓಡಾಡಬೇಕು ಎಂದು ಎಚ್ಚರಿಕೆ ನೀಡಲಾಗುತ್ತಿದೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಪ್ಪಳ ನಗರದ ಅಶೋಕ್ ಸರ್ಕಲ್ ಸೇರಿದಂತೆ ವಿವಿದೆಡೆ ಇಂದು ದಂಡ ಹಾಕು ಕೆಲಸ ನಡೆದಿದೆ. ನಗರ ಠಾಣೆಯ ಪಿಐ ಪ್ರಕಾಶ ಮಾಳಿ ನೇತೃತ್ವದಲ್ಲಿ ಜನರಿಗೆ ಎಚ್ಚರಿಕೆ ನೀಡುವ ಮೂಲಕ ದಂಡ ವಸೂಲಿ ಮಾಡಲಾಗುತ್ತಿದೆ. ಕರೋನಾ ಚೈನ್ ಕಟ್ ಮಾಡಲು ಇದು ಅವಶ್ಯಕವಾಗಿದೆ ಜನರು ಇದರ ಬಗ್ಗೆ ಜಾಗೃತರಾಗಬೇಕು ಎಂದು ಪಿಐ ಪ್ರಕಾಶ ಮಾಳಿ ಜಾಗೃತಿ ಮೂಡಿಸಿದರು.

Please follow and like us:
error