ಮಾನಸಿಕ ಅಸ್ವಸ್ಥಳ ನವಜಾತ ಶಿಶು ರಕ್ಷಣೆ : ಜಿಲ್ಲಾ ಆಸ್ಪತ್ರೆಗೆ ದಾಖಲು

ಕೊಪ್ಪಳ ಏ. : ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಮಾನಸಿಕ ಅಸ್ವಸ್ಥ ತಾಯಿಯೊಬ್ಬಳಿಗೆ ಜನಿಸಿದ  ನವಜಾತ ಹೆಣ್ಣು ಶಿಶುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯು ದಾಖಲಿಸಲಾಗಿದೆ.
  ತಾವರಗೇರಾ ಪಟ್ಟಣದಲ್ಲಿ ಬುಧವಾರ (ಏ.17 ರ) ಬೆಳಗ್ಗೆ 04 ಗಂಟೆಯ ಸುಮಾರಿಗೆ ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು ನವಜಾತ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದು, ಮಗುವಿನ ಪೋಷಣೆ ಮತ್ತು ರಕ್ಷಣೆಯನ್ನು ಮಾಡದೇ ಎಲ್ಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರುವುದನ್ನು ಗಮನಿಸಿ, ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.  ತಾವರಗೇರಾ ಪೊಲೀಸ್ ಠಾಣೆಯ  ಅರಕ್ಷಕ ಉಪ-ನಿರೀಕ್ಷಕರಾದ ಮಾಹಾಂತೇಶ ಸಜ್ಜನರವರು ತಾಯಿ ಮತ್ತು ಮಗುವನ್ನು ರಕ್ಷಿಸಿ ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿರುತ್ತಾರೆ.  ಈ ಮಗುವಿನ ತಾಯಿಯು ಮಗುವಿಗೆ ಸೂಕ್ತ ಪೋಷಣೆ ಮತ್ತು ರಕ್ಷಣೆ ನೀಡುವುದು ಕಷ್ಟಸಾಧ್ಯವಾಗಿದ್ದು, ಮಗುವಿನ ತೂಕವು 1.5 ಕೆ.ಜಿ ಇದೆ.  ಇದರಿಂದಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವುದರಿಂದಾಗಿ ಮತ್ತು ತೀವ್ರ ಚಿಕಿತ್ಸಾ ನಿಗಾ ಘಟಕಕ್ಕೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆ ಒದಗಿಸುವದು ಅಗತ್ಯವಿರುವುದರಿಂದಾಗಿ ಹಾಗೂ ಮಗು ತಾಯಿಯೊಂದಿಗೆ ಇದ್ದಲ್ಲಿ ಅದು ಬದಕುವ ಸಾಧ್ಯತೆಯು ಕ್ಷಿÃಣಿಸುವದನ್ನು ಗಮನಿಸಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವೇರಿಯವರು ಮಗುವನ್ನು ಮುಂದಿನ ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ 108 ವಾಹನದ ಮೂಲಕ ಕಳುಹಿಸಿಕೊಟ್ಟಿರುತ್ತಾರೆ.  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸೂಚನೆಯಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರವಿಕುಮಾರ ಪವಾರ ಮಗುವನ್ನು ಸ್ವಿÃಕರಿಸಿದ್ದು, ಮಗುವಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದಿದ್ದರಿಂದಾಗಿ ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯುಗೆ ದಾಖಲಿಸಿ ಈ ಮಾಹಿತಿಯನ್ನು ಅಮೂಲ್ಯ (ಪಿ) ದತ್ತು ಸ್ವಿÃಕಾರ ಕೇಂದ್ರದ ಸಂಯೋಜಕರಿಗೂ ಮಾಹಿತಿಯನ್ನು ನೀಡಿದೆ.  ಸಧ್ಯ ಮಗುವು ಎಸ್.ಎನ್.ಸಿ.ಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತದೆ.
  ಮಗುವಿನ ರಕ್ಷಣೆಯಲ್ಲಿ  ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವೇರಿ, ತಾವರಗೇರಾ ಪೊಲೀಸ್ ಠಾಣೆಯ ಅರಕ್ಷಕ ಉಪ-ನಿರೀಕ್ಷಕ (ಪಿ.ಎಸ್.ಐ) ಮಹಾಂತೇಶ ಸಜ್ಜನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಈ ತಂಡದಲ್ಲಿ ಭಾಗವಹಿಸಿರುತ್ತಾರೆ.  ಮಗುವಿನ ತುರ್ತು ಚಿಕಿತ್ಸೆಗಾಗಿ ಮಾರ್ಗದರ್ಶನವನ್ನು ಜಿಲ್ಲಾ ಶಸ್ತç ಚಿಕಿತ್ಸಕ ದಾನರೆಡ್ಡಿರವರು ನೀಡಿದ್ದಾರೆ.
  ಮಕ್ಕಳನ್ನು ಎಲ್ಲೆಂದರಲ್ಲಿ ತೊರೆದು ಹೋಗುವುದು ಭಾರತೀಯ ದಂಡ ಸಂಹಿತೆ ಕಲಂ 317ರಡಿ ಶಿಕ್ಷಾರ್ಹ ಅಪರಾಧವಾಗಿದೆ.  ಕಾನೂನು ಬಾಹಿರವಾಗಿ ಮಕ್ಕಳ ದತ್ತು ಪ್ರಕ್ರಿÃಯೆಯೂ ಸಹ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಕುರಿತು ಸಮುದಾಯದವರು ಜಾಗೃತರಾಗಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error