ಮಾನವ ಹಕ್ಕುಗಳ ಅರಿವು ಅಗತ್ಯ

Kanndanet NEWS ೧೯೪೮ ಡಿಸೇಂಬರ್ ೧೦ ರಂದು ಪ್ಯಾರಿಸ್ ನಲ್ಲಿ ವಿಶ್ವಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಾಯಿತು. ಅದರನ್ವಯ ಭಾರತದಲ್ಲಿ ೧೯೯೩ರಲ್ಲಿ ಮಾನವ ಹಕ್ಕುಗಳ ಆಯೋಗ ರಚಿಸಲಾಯಿತು. ಇದರ ಪ್ರಮುಖ ಉದ್ದೇಶವು ಸಾಮಾನ್ಯ ನಾಗರಿಕನ ಬದುಕಿಗೆ ಗೌರವ, ಸಮಾನತೆ ಜೀವನವಾಸಕ್ಕೆ ಧಕ್ಕೆಯಾದಾಗ ಮಾನವ ಹಕ್ಕುಗಳು ನೆರವು ನೀಡಿ ಸಂರಕ್ಷಿಸುತ್ತವೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಉತ್ತೇಜನಗೂಳಿಸುವ ಜವಾಬ್ದಾರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಾಗಿದೆ. ಎಂದು ಹೇಳಿದರು. ಮಾನವ ಹಕ್ಕುಗಳು ಉಲ್ಲಂಘನೆಯಾಗಿ ಪರಿಹಾರ ಕಂಡುಕೊಂಡ ಉದಾಹರಣೆ ಸಹಿತ ತಿಳಿಸಿದ ಅವರು ತಾವು ಸಹ ಮಾನವ ಹಕ್ಕುಗಳು ಉಲ್ಲಂಘನೆಯಾದಾಗ ನ್ಯಾಯಯುತವಾದ ಮಾರ್ಗ ಪ್ರತಿಯೋರ್ವ ನಾಗರಿಕನು ಅನುಸರಿಸಬೇಕು ಮತ್ತು ಅದರ ಅರಿವು ತಮಗೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯರು ಹಿರಿಯ ವಕೀಲರು ಆದ ಎಸ್. ಕೆ. ಜಮಾದಾರ ಸಲಹೆ ನೀಡಿದರು..

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕೊಪ್ಪಳ. ಹಾಗೂ ವಿವಿಧ ಇಲಾಖೆ ಮತ್ತು ಅಡಿಯಲ್ಲಿ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಮಾನವ ಹಕ್ಕುಗಳ ಘಟಕದಡಿಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಾನವ ಹಕ್ಕುಗಳ ಅರಿವು ತಮ್ಮೆಲ್ಲರಿಗೂ ಇರಬೇಕು. ಅವು ನಮ್ಮ ಸಂರಕ್ಷಣೆ ಮಾಡುತ್ತವೆ. ಕಾನೂನಿನ ಚೌಕಟ್ಟಿನಲ್ಲಿ ಮಾನವ ಹಕ್ಕುಗಳನ್ನು ಹೇಗೆ ಪಡೆಯಬೇಕು ಎಂದು ತಾವೆಲ್ಲರೂ ತಿಳಿದುಕೊಳ್ಳುವುದು ಬಹಳ? ಅಗತ್ಯವಿದೆ ಆದ್ದರಿಂದ ಇಂತಹ ಕಾರ್ಯಕ್ರಮಗಳು ಮೂಲಕ ಮಾನವ ಹಕ್ಕುಗಳ ಮಾಹಿತಿಯನ್ನು ನೀಡಲು ಪೂರಕವಾಗಿವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೆ.ಎಸ್. ಪಾಟೀಲ್ ಅವರು ನಮ್ಮ ಸಂವಿಧಾನ ಭಾರತೀಯ ನಾಗರಿಕರಿಗೆ ಮಾನವ ಹಕ್ಕುಗಳನ್ನು ನೀಡಿದೆ. ಮಾನವ ಹಕ್ಕುಗಳು ನಮ್ಮ ಜೀವ ಮತ್ತು ಸ್ವಾತಂತ್ರ್ಯಗಳ ಸಂರಕ್ಷಣೆಗಾಗಿ ಇವೆ. ನಮ್ಮ ಹಕ್ಕುಗಳು ಉಲ್ಲಂಘನೆಯಾದಾಗ ನಾವು ನ್ಯಾಯಾಲಯದ ಮೂಲಕ ನ್ಯಾಯವನ್ನು ಪಡೆಯಬಹುದಾಗಿದೆ. ಹಾಗೆಯೇ ನಮ್ಮ ಸಂವಿಧಾನ ಕರ್ತವ್ಯ ಕೂಡ ನೀಡಿದೆ ಅದನ್ನು ನಾವೆಲ್ಲರೂ ಪಾಲಿಸುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರಿಗೂ ಜನ್ಮತಃ ಬಂದಿರುವ ಹಕ್ಕುಗಳನ್ನು ಮಾನವ ಹಕ್ಕುಗಳೆಂದು ಗುರುತಿಸಿ ಅವುಗಳು ಅನುಭವಿಸಲು ಯಾವುದೇ ಜಾತಿ, ಲಿಂಗ, ಜನಾಂಗ, ವರ್ಗ ವಯೋಮಿತಿಯ ತಾರತಮ್ಯವಿಲ್ಲದೆ ಒಂದು ದೇಶ ಸ್ವಾತಂತ್ರ್ಯವಾಗಿರಲಿ ಅಥವಾ ಇಲ್ಲದಿರಲಿ ವಿಶ್ವದಲ್ಲಿರುವ ಪ್ರತಿಯೊಬ್ಬರಿಗೆ ಮಾನವ ಹಕ್ಕುಗಳನ್ನು ಅನುಭವಿಸುವ ಮತ್ತು ಸಂರಕ್ಷೀಸುವ ಜವಾಬ್ದಾರಿಯಾಗಿದೆ. ಅದಕ್ಕಾಗಿ ಮಾನವ ಹಕ್ಕುಗಳ ಆಯೋಗದ ಜೊತೆಗೆ ಮಾನವಿತೆಯ ಮೌಲ್ಯಗಳ ಪಾಲನೆ ಪ್ರತಿಯೊಬ್ಬ ಪ್ರಜೆಯು ಕರ್ತವ್ಯವಾಗಿದೆ. ಎಂದರು. ಮಹಾವಿದ್ಯಾಲಯದ ಪ್ರಾದ್ಯಾಪಕ ಶರಣಬಸಪ್ಪ ಬಿಳಿಯಲೇ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಷಿಣಿ ಸಂಕಲಪೂರ ಪ್ರಾರ್ಥಿನೆಗೀತೆ ನೆರವೇರಿಸಿದರು, ಹನುಮೇಶ್ ಸ್ವಾಗತಿಸಿ ನಿರೂಪಿಸಿದರು ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಂಧರ್ಭದಲ್ಲಿ ಭಾಗವಯಿಸಿದ್ದರು.

Please follow and like us:
error