ಮಾಧುಸ್ವಾಮಿಯ ಸಂಸ್ಕೃತಿ ಬದಲಾಯಿಸಿದ ಸಿಎಂ ಬಿಎಸ್ ವೈ

ಸಚಿವ ಸಂಪುಟ ವಿಸ್ತರಣೆ ಖಾತೆಯಲ್ಲಿ ಬದಲಾವಣೆ

ಬೆಂಗಳೂರು,  : ಸಚಿವ ಸಂಪುಟ ವಿಸ್ತರಣೆಯಾಗಿ ವಾರದ ಬಳಿಕ ನೂತನ ಸಚಿವರಿಗೆ ಗುರುವಾರ ಖಾತೆ ಹಂಚಿಕೆ  ಮಾಡಲಾಗಿದ್ದು, ಈ ವೇಳೆ ತಮ್ಮಲ್ಲಿದ್ದ ಖಾತೆಯಲ್ಲಿ ಬದಲಾವಣೆ ಮಾಡಿರುವುದಕ್ಕೆ ಹಿರಿಯ ಸಚಿವರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮತ್ತೊಮ್ಮೆ ಖಾತೆ ಮರು ಹಂಚಿಕೆ ಮಾಡಿದ್ದು, ಆ ಮೂಲಕ ಮಾಧುಸ್ವಾಮಿ ಸಹಿತ ಅಸಮಾಧಾನಗೊಂಡಿರುವ ಸಚಿವರ ಮನವೊಲಿಸಲು ಮುಂದಾಗಿದ್ದಾರೆ.

ಅದರಂತೆ ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಖಾತೆಯ ಜೊತೆಗೆ ಹಜ್ ಮತ್ತು ವಕ್ಫ್ ಇಲಾಖೆ ಖಾತೆ ನೀಡಲಾಗಿದೆ. ನಿನ್ನೆ ಅವರಿಗೆ ಬದಲಾಯಿಸಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆಯನ್ನು ಅರಣ್ಯ ಸಚಿವರಾಗಿರುವ ಅರವಿಂದ ಲಿಂಬಾವಳಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಅಬಕಾರಿ ಖಾತೆ ನೀಡಿದ್ದರಿಂದ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದ ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ ಮತ್ತು ಸಕ್ಕರೆ ಇಲಾಖೆ ಖಾತೆ ನೀಡಲಾಗಿದೆ. ಕೆ.ಗೋಪಾಲಯ್ಯರಿಗೆ ನೀಡಿದ್ದ ತೋಟಗಾರಿಕೆ ಮತ್ತು ಸಕ್ಕರೆ ಖಾತೆಯನ್ನು ಹಿಂಪಡೆದು ಅಬಕಾರಿ ಇಲಾಖೆಯ ಖಾತೆ ನೀಡಲಾಗಿದೆ. ಆರ್.ಶಂಕರ್ ಅವರಿಗೆ ನೀಡಿದ್ದ ಪೌರಾಡಳಿತ ಖಾತೆಯನ್ನು ಹಿಂಪಡೆದು ಅವರಿಗೆ ತೋಟಗಾರಿಕೆ, ರೇಷ್ಮೆ ಇಲಾಖೆಯ ಖಾತೆ ನೀಡಲಾಗಿದೆ. ಸಿ.ನಾರಾಯಣಗೌಡರಿಗೆ ಯುವಜನ ಕ್ರೀಡೆ ಜೊತೆಗೆ ನೀಡಿದ್ದ ಹಜ್ ಮತ್ತು ವಕ್ಫ್ ಇಲಾಖೆಯ ಖಾತೆಯನ್ನು ಹಿಂಪಡೆದು ಯೋಜನೆ ಸಾಂಖ್ಯಿಕ ಅಂಕಿಅಂಶಗಳ ಖಾತೆ ನೀಡಿ ಮರು ಹಂಚಿಕೆ ಮಾಡಲಾಗಿದೆ.

 

Please follow and like us:
error