ಮಾಜಿ ಸಚಿವ ತಂಗಡಗಿ ಹುಟ್ಟುಹಬ್ಬ : ಅಭಿಮಾನಿಗಳಿಂದ ದೇಣಿಗೆ

ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಅದ್ದೂರಿ ಜನ್ಮ ದಿನಾಚರಣೆಗೆ ಬ್ರೇಕ್ ಹಾಕಿರುವ ಅಭಿಮಾನಿಗಳು, ಅದರ ಬದಲಾಗಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಆಹಾರ ಪದಾರ್ಥ ಹಾಗೂ ಹಣ್ಣು ಹಂಪಲು ದೇಣಿಗೆ ಕಳಿಸಿಕೊಟ್ಟಿದ್ದಾರೆ. ಜಿಲ್ಲಾಡಳಿತದ ಸಹಯೋಗದಲ್ಲಿ ಗವಿಮಠದಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ತರಕಾರಿ, ಆಹಾರಧಾನ್ಯ, ಹಣ್ಣು-ಹಂಪಲನ್ನು ಕಾರಟಗಿಯಲ್ಲಿ ಸಂಗ್ರಹಿಸಿ ಕೊಪ್ಪಳಕ್ಕೆ ಕಳುಹಿಸಲಾಯಿತು.
ತಂಗಡಗಿ ಅಭಿಮಾನಿಗಳು 11 ಕ್ವಿಂಟಲ್ ಅಕ್ಕಿ, 50 ಕೆಜಿ ಪೈನಾಪಲ್, 50 ಕೆಜಿ ಮಾವು, 10 ಕೆಜಿ ಮೊಸಂಬಿ, 10 ಕೆಜಿ ಸೇಬು ಹಾಗೂ 10 ಸಾವಿರ ರೂಪಾಯಿ ಬೆಲೆಯ ತರಕಾರಿಯನ್ನು ಕಾರಟಗಿಯಿಂದ ಕಳುಹಿಸಿಕೊಟ್ಟಿದ್ದಾರೆ. ತಮ್ಮ ಜನ್ಮದಿನಾಚರಣೆಯಂದು ಯಾರೂ ಕೇಕ್ ಕಟ್ ಮಾಡದೇ ಅದೇ ಹಣದಲ್ಲಿ ಕೋವಿಡ್ ಸೋಂಕಿತರಿಗೆ ಸಹಾಯ ಮಾಡಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅಭಿಮಾನಿಗಳಿಗೆ ಕರೆ ನೀಡಿದ್ದರು. ಈ ಹಿನ್ನೆಲೆ, ಅವರ ಅಭಿಮಾನಿಗಳು ಕಾರಟಗಿಯ ತಂಗಡಗಿ ನಿವಾಸದಲ್ಲಿ ಆಹಾರದ ಕಿಟ್ ತಂದು ಗವಿಮಠಕ್ಕೆ ಕಳಿಸಿಕೊಟ್ಟಿದ್ದಾರೆ..

Please follow and like us:
error