ಮಹಿಳಾ ಸಂಪಾದಕರ ಪತ್ರಿಕೆಗೆ ಸೂಕ್ತ ಆದ್ಯತೆ: ಆಯುಕ್ತರ ಭರವಸೆ

ಬೆಂಗಳೂರು: ರಾಜ್ಯ ಮಹಿಳಾ ಸಂಪಾದಕರ ಪತ್ರಿಕೆಗಳ ಬೇಡಿಕೆ ಈಡೇರಿಸಲು ಶೀಘ್ರವಾಗಿ ಸಭೆ ಕರೆದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಜಾಹೀರಾತು ನೀಡಿಕೆ ಆದ್ಯತೆ ಪರಿಗಣಿಸಲಾಗುವುದು ಎಂದು ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಭರವಸೆ ನೀಡಿದ್ದಾರೆ.

ರಾಜ್ಯ ಮಹಿಳಾ ದಿನ ಪತ್ರಿಕೆಗಳ ಸಂಪಾದಕಿಯರ ಸಂಘದ ಅಧ್ಯ

ಕ್ಷೆ ರಶ್ಮಿ ಪಾಟೀಲ ಮತ್ತು ಪದಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಬೇಡಿಕೆ ಪಟ್ಟಿಯನ್ನು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಉಪ ನಿರ್ದೇಶಕರಾದ ಕೆ.ಪಿ.ಪುಟ್ಟಸ್ವಾಮಯ್ಯ ಅವರಿಗೆ ಅರ್ಪಿಸಲಾಯಿತು.

ಸಂಪಾಕಿಯರ ಸಂಘದ ಪದಾಧಿಕಾರಿಗಳಾದ ಲೀಲಾವತಿ, ಬಬಿತಾ ಪವಾರ್, ಶಾಂಭವಿ ನಾಗರಾಜ್, ಕೌಶಲ್ಯ, ಗೋಪಿಕಾ ಮಲ್ಲೇಶ್, ಕವಿತಾ, ರೇಖಾ, ಕಲಾವತಿ ಮತ್ತಿತರರು ಹಾಜರಿದ್ದರು.

Please follow and like us:
error