ಮಹಾರಾಷ್ಟ್ರ: ಬಿಜೆಪಿ ಸರಕಾರ ರಚನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ

ಮುಂಬೈ,  : ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚನೆಯನ್ನು ವಿರೋಧಿಸಿ ಶಿವಸೇನೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ತಾರತಮ್ಯದ ಕ್ರಮ ಕೈಗೊಂಡಿದ್ದಾರೆ ಎಂದು ಶಿವಸೇನೆ ಅರ್ಜಿಯಲ್ಲಿ ಆರೋಪಿಸಿದೆ. ಗೌರವಾನ್ವಿತ ರಾಜ್ಯಪಾಲರು ಬಿಜೆಪಿಯ ಅಕ್ರಮ ಅತಿಕ್ರಮಣಕ್ಕೆ ಅವಕಾಶ ನೀಡುವ ಮೂಲಕ ತನ್ನ ಸಾಂವಿಧಾನಿk ಕಚೇರಿಯ ಘಟನೆಯನ್ನು ಕುಂದಿಸಿದ್ದಾರೆ ಎಂದು ಶಿವಸೇನೆಯು ತಿಳಿಸಿದೆ.

ಫೆವಿಕಾಲ್ ಹಚ್ಚಿ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳಿ: ಬಿಜೆಪಿಗೆ ಉದ್ಧವ್ ಠಾಕ್ರೆ

  ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆಯ ಅಚ್ಚರಿಯ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಘಟನೆಯನ್ನು ‘ಮಹಾರಾಷ್ಟ್ರದ ಮೇಲೆ ನಡೆಸಿದ ಸರ್ಜಿಕಲ್ ದಾಳಿ’ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಣ್ಣಿಸಿದ್ದಾರೆ.

ಬಿಜೆಪಿ ಪಕ್ಷದವರು “ಫೆವಿಕಾಲ್ ಹಚ್ಚಿ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು” ಎಂದು ಹೇಳಿದರು. ಅಜಿತ್ ಪವಾರ್ ಅವರು ಬಿಜೆಪಿ ಜತೆ ಕೈಜೋಡಿಸಿರುವುದು ಸಂವಿಧಾನಕ್ಕೆ ಹಾಗೂ ಜನರ ತೀರ್ಪಿಗೆ ತೋರಿದ ಅಗೌರವವಾಗಿದೆ ಎಂದೂ ಠಾಕ್ರೆ ಹೇಳಿದ್ದಾರೆ.

“ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಈ ಮಕ್ಕಳಾಟ ನಗೆಪಾಟಲಿಗೀಡಾಗಿದೆ. ಇದರ ನಂತರ ಇನ್ನು ಚುನಾವಣೆಗಳನ್ನು ಘೋಷಿಸಬಾರದು ಎಂದು ಅನಿಸುತ್ತದೆ. ಇದು  ಮಹಾರಾಷ್ಟ್ರದ ಮೇಲಿನ ಸರ್ಜಿಕಲ್ ದಾಳಿ, ಶಿಸ್ತುಕ್ರಮದ ಕುರಿತಂತೆ ನಿರ್ಧರಿಸುತ್ತೇವೆ” ಎಂದು ಮುಂಬೈಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಹೇಳಿದರು.

Please follow and like us:
error