ಮಹಾರಾಷ್ಟ್ರ ಬಿಜೆಪಿ ಸರಕಾರ ರಚನೆ ಪ್ರಶ್ನಿಸಿ ರಿಟ್ ಅರ್ಜಿ: ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ನೀಡಲಿರುವ ಸುಪ್ರೀಂ

ಹೊಸದಿಲ್ಲಿ, ನ.25: ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆಯಾಗಿರುವುದನ್ನು ಪ್ರಶ್ನಿಸಿ ಶಿವಸೇನೆ, ಎನ್ ಸಿಪಿ, ಮತ್ತು ಕಾಂಗ್ರೆಸ್ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ  ತೀರ್ಪನ್ನು  ಮಂಗಳವಾರಕ್ಕೆ ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟ್ ನಲ್ಲಿ  ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿದ್ದು,  ನಾಳೆ ಬೆಳಗ್ಗೆ 10:30 ತೀರ್ಪು ಪ್ರಕಟಿಸಲಿದೆ.

ದೇವೇಂದ್ರ ಫಡ್ನವಿಸ್ ಗೆ ಬೆಂಬಲವಿದೆ ಅವರಿಗೆ ಸರಕಾರ ರಚನೆಗೆ ಆಹ್ವಾನ ನೀಡುವಂತೆ  ರಾಜ್ಯಪಾಲರಿಗೆ ಎನ್ ಸಿಪಿಯ ಅಜಿತ್ ಪವಾರ್ ಪತ್ರ ಬರೆದಿದ್ದಾರೆ. ಅದರಂತೆ ರಾಜ್ಯಪಾಲರು ಫಡ್ನವೀಸ್ ಗೆ ಆಹ್ವಾನ ನೀಡಿದ್ದಾರೆ ಎಂದು ತುಷಾರ್ ಮೆಹ್ತಾ ವಾದ ಮಂಡಿಸಿದರು.

ಫಡ್ನವೀಸ್ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿ “ ಫಡ್ನವೀಸ್ ಗೆ ಬೆಂಬಲ ಇದೆ. ರಾಜ್ಯಪಾಲರು ಸರಿಯಾದ ತೀರ್ಮಾನ ಕೈಗೊಂಡಿದ್ದಾರೆ.  170 ಶಾಸಕರ ಬೆಂಬಲ ಇರುವವರಿಗೆ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ಶಾಸಕರ ಸಹಿಯನ್ನು ಫೋರ್ಜರಿ ಮಾಡಿಲ್ಲ. ಬಹುಮತ ಸಾಬೀತುಪಡಿಸಲು ಫಡ್ನವೀಸ್ ಸಿದ್ದ. ಆದರೆ ಬಹುಮತ  ಸಾಬೀತುಪಡಿಸಲು ನ್ಯಾಯಾಲಯ ಸಮಯ ನಿಗದಿಪಡಿಸಬಾರದು  ಎಂದು ಹೇಳಿದರು.

ಸದನದಲ್ಲಿ ಬಹುಮತ ಸಾಬೀತು ಈಗ ಅನಿವಾರ್ಯ. ಆದರೆ ಬಹುಮತ ಪರೀಕ್ಷೆ ರಾಜಭವನದಲ್ಲಿ ನಡೆಯುವಂತಿಲ್ಲ. ವಿಧಾನಸಭೆಯಲ್ಲೇ ಬಹುಮತ ಪರೀಕ್ಷೆ ನಡೆಯಬೇಕು.  24 ಗಂಟೆಗಳಲ್ಲಿ  ಬಹುಮತ ಪರೀಕ್ಷೆ ನಡೆಸಬೇಕು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅಭಿಪ್ರಾಯಪಟ್ಟರು.

ರಾಜ್ಯಪಾಲರಿಗೆ ಕೊಟ್ಟಿರುವ ಎನ್ ಸಿಪಿಯ  54 ಶಾಸಕರ ಬೆಂಬಲ ಪತ್ರ ಸರಿಯಾಗಿದೆ. ಅಜಿತ್ ಪವಾರ್ ಎನ್ ಸಿಪಿಯ ಶಾಸಕಾಂಗ ಪಕ್ಷದ ನಾಯಕ. ತಾನು ಕೊಟ್ಟಿರುವ ಶಾಸಕರ ಪಟ್ಟಿ ಕಾನೂನಾತ್ಮಕ ಹಾಗೂ ಸಾಂವಿಧಾನಿಕವಾಗಿ ಸರಿಯಾಗಿದೆ .  ಎಂದು ಅಜಿತ್ ವವಾರ್ ಪರ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿದರು.

“ನವೆಂಬರ್ 22ರಂದು ಸಂಜೆ  ಸುದ್ದಿಗೋಷ್ಠಿ ನಡೆಸಿ ಮೂರು ಪಕ್ಷಗಳು ಸರಕಾರ ರಚನೆ ಬಗ್ಗೆ ನಿರ್ಧಾರ ಪ್ರಕಟಿಸಿವೆ. ಆದರೆ ಮರುದಿನ ಬೆಳಗ್ಗೆ ಸರಕಾರ ರಚನೆಯಾಗಿದೆ. ರಾಷ್ಟ್ರಪತಿ ಆಡಳಿತ ವಾಪಸ್ ತೆಗೆಯುವ ಆತುರ ಏನಿತ್ತು. ರಾಜ್ಯಾಪಾಲರು ಅ.24ರಿಂದ ನ.22ರ ವರೆಗೆ  ಕಾದಿದ್ದಾರೆ. ಆದರೆ ಅದೊಂದು ಮುಂಜಾನೆಯ ವರೆಗೆ ಕಾಯಲು ಸಾಧ್ಯವಾಗಲಿಲ್ಲ. ರಾಜ್ಯಪಾಲರ ನಡೆ ದುರುದ್ದೇಶದಿಂದ ಕೂಡಿದೆ.’ ಕುದುರೆ ರೇಸ್ ನಲ್ಲಿ ಜಾಕಿ ಓಡಿ ಹೋಗಿರಬಹುದು. ಆದರೆ ಕುದುರೆಗಳು ಇನ್ನೂ ಅಲ್ಲೇ ಇವೆ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದಿಸಿದರು.

ಎನ್ ಸಿಪಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ “ ಬಿಜೆಪಿಗೆ ಬೆಂಬಲ ನೀಡಲು ಎನ್ ಸಿಪಿಯ 54 ಶಾಸಕರು ಸಹಿ ಹಾಕಿರಲಿಲ್ಲ. ಸಹಿ ಪಡೆದದ್ದೇ ಬೇರೆ ಉದ್ದೇಶಕ್ಕಾಗಿ. ಅದರೆ ಅದನ್ನು ಬಳಸಿಕೊಂಡದ್ದೇ ಬೇರೆ ಉದ್ದೇಶಕ್ಕೆ.  ಶಾಸಕರ ಬೆಂಬಲ ತೋರಿಸಿದ ಪತ್ರದಲ್ಲಿ ಅಕ್ರಮ ನಡೆದಿದೆ. ಬಿಜೆಪಿ ಬಹಳ ಜಾಣತನದಿಂದ ಅರ್ಧ ಸತ್ಯ ಹೇಳಿದೆ. 154 ಶಾಸಕರ ಬೆಂಬಲದ ಅಸಲಿ ಪತ್ರ ನಮ್ಮ ಬಳಿ ಇದೆ. ಇಂದೇ ಬಹುಮತವನ್ನು  ಸಾಬೀತುಪಡಿಸಲು  ಅವಕಾಶ ನೀಡಿ,  ಎಂದು  ಹೇಳಿದರು.

ಮುಕುಲ್ ರೋಹ್ಟಗಿ ವಾದ ಮಂಡಿಸಿ ಸದನದಲ್ಲಿ ಬಹುಮತ ಸಾಬೀತುಪಡಿಸಲು ಈಗಾಗಲೇ ಕೆಲವು ನಿಯಮಗಳನ್ನು ರೂಪಿಸಲಾಗಿದೆ.  ಹಂಗಾಮಿ ಸ್ಪೀಕರ್ ನೇಮಕವಾಗಬೇಕು. ಬಳಿಕ ಶಾಸಕರ ಪ್ರಮಾಣವಚನ. ಈ ಎಲ್ಲ ನಿಯಮಗಳು ವಿಧಾನಸಭೆಯಲ್ಲಿ ನಡೆಯಬೇಕು. ರಾಜ್ಯಪಾಲರು ಬಹುಮತ ಸಾಬೀತಿಗೆ 14 ದಿನಗಳ ಕಾಲಾವಕಾಶ ಕೊಟ್ಟಿದ್ದಾರೆ. ಸಂವಿಧಾನದ 212ನೇ ವಿಧಿ ಪ್ರಕಾರ ಸದನದ ವ್ಯವಹಾರಗಳಲ್ಲಿ ಕೋರ್ಟ್ ಮಧ್ಯೆಪ್ರವೇಶಿಸಬಾರದು  ಎಂದು ಮನವಿ ಮಾಡಿದರು.

Please follow and like us:
error