ಮಹಾರಾಷ್ಟ್ರದಲ್ಲಿ ನಾವು ಸರಕಾರ ರಚಿಸುವುದಿಲ್ಲ: ಬಿಜೆಪಿ

ಮುಂಬೈನ, 10: ಮಹಾರಾಷ್ಟ್ರದಲ್ಲಿ ಸರಕಾರದ ರಚನೆಗೆ ಸಂಬಂಧಿಸಿ ಕಳೆದ ಎರಡು ವಾರಗಳಿಂದ ಮಿತ್ರಪಕ್ಷ ಶಿವಸೇನೆಯ ಜೊತೆ ಹಗ್ಗ-ಜಗ್ಗಾಟದಲ್ಲಿ ತೊಡಗಿದ್ದ ಬಿಜೆಪಿ ರವಿವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ನಾವು ರಾಜ್ಯದಲ್ಲಿ ಸರಕಾರ ರಚಿಸುವುದಿಲ್ಲ. ನಮ್ಮ ಬಳಿ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆ ಇಲ್ಲ ಎಂದು ಮಾಹಿತಿ ನೀಡಿದೆ.

ರಾಜ್ಯಪಾಲ ಭಗತ್ ಸಿಂಗ್ ಶನಿವಾರ ರಾಜ್ಯ ವಿಧಾನಸಭೆಯ ದೊಡ್ಡ ಪಕ್ಷ ಬಿಜೆಪಿಗೆ ಸರಕಾರ ರಚಿಸುವಂತೆ ಆಹ್ವಾನ ನೀಡಿದ್ದರು.

‘‘ಮಹಾರಾಷ್ಟ್ರದ ಜನತೆ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮೈತ್ರಿ ಸರಕಾರ ರಚನೆಗೆ ಆಸಕ್ತಿ ತೋರದೆ ಜನಾದೇಶಕ್ಕೆ ಅಗೌರವ ತೋರಿದೆ. ಎನ್‌ಸಿಪಿ ಹಾಗೂ ಕಾಂಗ್ರೆಸ್‌ನ ಬೆಂಬಲದೊಂದಿಗೆ ಶಿವಸೇನೆ ಸರಕಾರ ರಚನೆಗೆ ಹಕ್ಕು ಮಂಡಿಸಲಿ’’ ಎಂದು ಬಿಜೆಪಿಯ ಕೋರ್ ಕಮಿಟಿ ಸಭೆಯ ಬಳಿಕ ಹಿರಿಯ ನಾಯಕ ಚಂದ್ರಕಾಂತ್ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.

Please follow and like us:
error