ಬೆಂಗಳೂರು : ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾನಾಯಕ ಧಾರವಾಹಿ ಇಂದು ಪ್ರಸಾರವಾಗಿಲ್ಲ. ಅದರ ಬದಲು ಚಲನಚಿತ್ರವೊಂದು ಪ್ರಸಾರವಾಗಿದೆ. ಮಹಾನಾಯಕ ಧಾರವಾಹಿಗಾಗಿ ಕಾಯ್ದು ಕುಳಿತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಇದರಿಂದ ತೀವ್ರ ನಿರಾಸೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ ಪಕ್ಷ ಇದರ ಬಗ್ಗೆ ಜೀ ವಾಹಿನಿ ಮೊದಲೇ ಮುನ್ಸೂಚನೆ ನೀಡಬಹುದಿತ್ತು ನೀಡದೇ ಏಕಾಏಕಿ ಇಂದು ಪ್ರಸಾರ ತಡೆದಿದ್ದು ಏಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇತ್ತೀಚಿಗೆ ಮಹಾನಾಯಕ ಧಾರವಾಹಿಯನ್ನು ಪ್ರಸಾರವಾಗದಂತೆ ತಡೆಯಲು ಕೆಲವು ದುಷ್ಟಶಕ್ತಿಗಳು ಪ್ರಯತ್ನ ನಡೆಸಿದ್ದವು. ಫೋನ್ ಮೂಲಕ ಬೆದರಿಕೆಯನ್ನೂ ಸಹ ಹಾಕಲಾಗಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಸಾರವಾಗದೇ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬಾಬಾಸಾಹೇಬರ ಜೀವನ ಚರಿತ್ರೆ ಆಧಾರಿತ ಧಾರಾವಾಹಿಯ ಪ್ರಸಾರವನ್ನೂ ಸಹಿಸದಷ್ಟು ಅಸಹಿಷ್ಣುಗಳಾಗಿರುವ ದುಷ್ಟಶಕ್ತಿಗಳ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಧಾರಾವಾಹಿಗೆ ಸಿಗದಷ್ಟು ಜನಪ್ರಿಯತೆ ಈ ಧಾರವಾಹಿಗೆ ಸಿಕ್ಕಿತ್ತು. ಅಭಿಮಾನಿಗಳು ಪ್ರತಿ ಊರಿನಲ್ಲೂ ಪ್ಲೆಕ್ಸ್ ಹಾಕಿಸುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಆದರೆ ಇಂದು ಏಕಾಏಕಿ ಬಂದ್ ಮಾಡಿರುವುದು ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ. ವಾಹಿನಿಯವರು ಸ್ಪಷ್ಟನೆ ನೀಡಬೇಕಿದೆ
ಮಹಾನಾಯಕ ಧಾರವಾಹಿ ಪ್ರಸಾರಕ್ಕೆ ಏಕಾಏಕಿ ತಡೆ : ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
Please follow and like us: