ಓದುವ ಹವ್ಯಾಸವನ್ನು ಪ್ರೇರೇಪಿಸುವ ಮನ್ವಂತರ ಕಾರ್ಯಕ್ರಮ : 2163 ವಿಮರ್ಶೆಗಳು ಸಲ್ಲಿಕೆ

ಕೊಪ್ಪಳ, :  ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಪ್ರೇರೇಪಿಸುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಹಿಮ್ಮಿಕೊಳ್ಳಲಾಗಿರುವ ಮನ್ವಂತರ ಕಾರ್ಯಕ್ರಮಕ್ಕೆ ತಾಲ್ಲೂಕುವಾರು ಕೊಪ್ಪಳ 514, ಗಂಗಾವತಿ 249, ಯಲಬುರ್ಗಾ 209 ಮತ್ತು ಕುಷ್ಟಗಿ 1191 ಸೇರಿದಂತೆ ಒಟ್ಟು 2163 ವಿಮರ್ಶೆಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ತಾಲ್ಲೂಕುವಾರು ಡಾ.ಕೆ.ಶಿವರಾಮ ಕಾರಂತರ ಚೋಮನದುಡಿ ಕೃತಿಗೆ ಕುಷ್ಟಗಿ-454, ಕೊಪ್ಪಳ-247, ಗಂಗಾವತಿ-107, ಯಲಬುರ್ಗಾ-128 ಸೇರಿದಂತೆ ಒಟ್ಟು 936 ವಿಮರ್ಶೆಗಳು ಸಲ್ಲಿಕೆಯಾಗಿವೆ. ಶ್ರೀಮತಿ ಸುಧಾಮೂರ್ತಿವರ ಮಹಾಶ್ವೇತ ಕೃತಿಗೆ ಕೊಪ್ಪಳ-41, ಗಂಗಾವತಿ-15, ಯಲಬುರ್ಗಾ-28 ಮತ್ತು ಕುಷ್ಟಗಿ-134 ಸೇರಿದಂತೆ ಒಟ್ಟು 218 ವಿಮರ್ಶೆಗಳು ಸಲ್ಲಿಕೆಯಾಗಿವೆ. ಆರ್.ಕೆ.ನಾರಾಯಣ್ ಅವರ ಸ್ವಾಮಿ ಮತ್ತು ಸ್ನೇಹಿತರು ಕೃತಿಗೆ ಕೊಪ್ಪಳ-105, ಗಂಗಾವತಿ-48, ಯಲಬುರ್ಗಾ-27, ಕುಷ್ಟಗಿ-185 ಸೇರಿದಂತೆ ಒಟ್ಟು 365 ವಿಮರ್ಶೆಗಳು ಸಲ್ಲಿಕೆಯಾಗಿವೆ. ಅಮೀಶ್ ತ್ರಿಪಾಠಿಯವರ ಮೆಲುಹ ಕೃತಿಗೆ ಕೊಪ್ಪಳ-8, ಗಂಗಾವತಿ-3 ಮತ್ತು ಕುಷ್ಟಗಿ-16 ಸೇರಿದಂತೆ ಒಟ್ಟು 27 ವಿಮರ್ಶೆಗಳು ಸಲ್ಲಿಕೆಯಾಗಿವೆ. ಅರವಿಂದ ಅಡಿಗರವರ ದಿ ವೈಟ್ ಟೈಗರ್ ಕೃತಿಗೆ ಕೊಪ್ಪಳ-16, ಗಂಗಾವತಿ-16 ಮತ್ತು ಕುಷ್ಟಗಿ-20 ಸೇರಿದಂತೆ ಒಟ್ಟು 52 ವಿಮರ್ಶೆಗಳು ಸಲ್ಲಿಕೆಯಾಗಿವೆ.
ಡಾ.ಕೆ.ಶಿವರಾಮ ಕಾರಂತರವರ ಬೆಟ್ಟದ ಜೀವ ಕೃತಿಗೆ ಕೊಪ್ಪಳ-48, ಗಂಗಾವತಿ-36, ಯಲಬುರ್ಗಾ-20 ಮತ್ತು ಕುಷ್ಟಗಿ-246 ಸೇರಿದಂತೆ ಒಟ್ಟು 350 ವಿಮರ್ಶೆಗಳು ಸಲ್ಲಿಕೆಯಾಗಿವೆ. ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕೃತಿಗೆ ಕೊಪ್ಪಳ-28, ಗಂಗಾವತಿ-20, ಯಲಬುರ್ಗಾ-05 ಮತ್ತು ಕುಷ್ಟಗಿ-122 ಸೇರಿದಂತೆ ಒಟ್ಟು 175 ವಿಮರ್ಶೆಗಳು ಸಲ್ಲಿಕೆಯಾಗಿವೆ. ಗಿರೀಶ್ ಕಾರ್ನಾಡ್ ಅವರ ಆಡಾಡತ ಆಯುಷ್ಯ ಕೃತಿಗೆ ಕೊಪ್ಪಳ-5, ಗಂಗಾವತಿ-1, ಯಲಬುರ್ಗಾ-1 ಮತ್ತು ಕುಷ್ಟಗಿ-6 ಸೇರಿದಂತೆ ಒಟ್ಟು 13 ವಿಮರ್ಶೆಗಳು ಸಲ್ಲಿಕೆಯಾಗಿವೆ. ಟ್ರೆವರ್ ನೋಹ ಅವರ ಬಾರ್ನ್ ಅ ಕ್ರೆöÊಮ್ ಕೃತಿಗೆ ಕೊಪ್ಪಳ-10, ಗಂಗಾವತಿ-2 ಮತ್ತು ಕುಷ್ಟಗಿ-4 ಸೇರಿದಂತೆ ಒಟ್ಟು 16 ವಿಮರ್ಶೆಗಳು ಸಲ್ಲಿಕೆಯಾಗಿವೆ. ಪೀಲ್ ನೈಟ್ ಅವರ ಶೂ ಡಾಗ್ ಕೃತಿಗೆ ಕೊಪ್ಪಳ-6, ಗಂಗಾವತಿ-1 ಮತ್ತು ಕುಷ್ಟಗಿ-4 ಸೇರಿದಂತೆ ಒಟ್ಟು 11 ವಿಮರ್ಶೆಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ

Please follow and like us:
error