ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘನೆಯಾದರೆ ದೂರು ದಾಖಲು

ಕೊಪ್ಪಳ,  : ಕೋವಿಡ್-19ರ ಸಾಕ್ರಾಂಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘನೆಯಾದರೆ ಸಂಬAಧಿಸಿದವರ ವಿರುದ್ದ ದೂರು ದಾಖಲಿಸಲಾಗುವುದೆಂದು ಕೊಪ್ಪಳ ತಹಶೀಲ್ದಾರ ಅಮರೇಶ ಬಿರಾದಾರ ತಿಳಿಸಿದ್ದಾರೆ.
ಕೋವಿಡ್-19ರ 2ನೇ ಅಲೆಯ ಸಾಕ್ರಾಂಮಿಕ ರೋಗವು ವ್ಯಾಪಕ ಹರಡುತ್ತಿರುವುದರಿಂದ ಸರ್ಕಾರವು ಮೇ 10 ರಿಂದ 24 ರವರೆಗೆ ರಾಜ್ಯಾದ್ಯಂತ ಲಾಕ್‌ಡೌನ್ ವಿಧಿಸಿ ಆದೇಶಿಸಿದ್ದು, ಕೊಪ್ಪಳ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಪಾಸಟಿವ್ ಪ್ರಕರಣಗಳು ಹೆಚ್ಚುತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರದ ಸುತ್ತೋಲೆಯನ್ವಯ ಮದುವೆ ಸಮಾರಂಭಕ್ಕೆ ಒಟ್ಟು 40 ಜನರು ಮೀರದಂತೆ ನಿರ್ಬಂಧಿಸಿ ಅನುಮತಿ ನೀಡಲು ಆದೇಶಿಸಿರುವುದರಿಂದ ಈ ಕುರಿತು ಜಿಲ್ಲಾಧಿಕಾರಿಗಳು ತಾಲೂಕಿನಾದ್ಯಾಂತ ಜರುಗುವ ಮದುವೆ ಸಮಾರಂಭಗಳಿಗೆ ಆಯಾ ತಹಶೀಲ್ದಾರರು ಅನುಮತಿ ಪತ್ರ ನೀಡುವಂತೆ ಸೂಚಿಸಿರುತ್ತಾರೆ.  ಅದರಂತೆ ಕೊಪ್ಪಳ ತಾಲೂಕಿನಾದ್ಯಾಂತ ಮೇ 13 ಹಾಗೂ 14 ರಂದು ಸುಮಾರು 90 ಮದುವೆ ಸಮಾರಂಭಗಳಿಗೆ ಈ ಕಾರ್ಯಾಲಯದಿಂದ ಅನುಮತಿ ಪತ್ರ ಈಗಾಗಗಲೇ ನೀಡಲಾಗಿರುತ್ತದೆ.
ಈ ಕುರಿತು ಸರ್ಕಾರದ ನಿರ್ದೇಶನದಂತೆ ತಾಲೂಕಾ ಆಡಳಿತದಿಂದ ಈಗಾಗಲೇ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಈ ನಿಯೋಜಿತ ತಂಡಗಳಿAದ ಮೇ 13 ಮತ್ತು 14 ರಂದು ಜರುಗುವ ಮದುವೆ ಸಮಾರಂಭಗಳ ಮೇಲೆ ತೀವ್ರ ನಿಗಾವಹಿಸಲಿದೆ.  ಸರ್ಕಾರವು ಬೆಳಗ್ಗೆ 06 ಗಂಟೆಯಿAದ 10 ಗಂಟೆವರೆಗೆ ಸಮಯ ನಿಗಧಿಪಡಿಸಿದ್ದರಿಂದ ಸರ್ಕಾರದ ನಿಯಮಾವಳಿಗಳ ಪ್ರಕಾರ ನಿಗದಿತ ಸಮಯದೊಳಗೆ ಮದುವೆ ಸಮಾರಂಭವನ್ನು ಮುಕ್ತಾಯಗೊಳಿಸಬೇಕು.  ಈ ಬಗ್ಗೆ ನಿಯೋಜಿತ ತಂಡವು ಮದುವೆ ಸಮಾರಂಭಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದು, ಯಾವುದೇ ರೀತಿಯ ಸರ್ಕಾರದ ನಿಯಮಗಳು ಉಲ್ಲಂಘನೆಯಾಗಿದ್ದು ಕಂಡು ಬಂದಲ್ಲಿ ವದು-ವರರ ತಂದೆ/ತಾಯಿಗಳ ವಿರುದ್ದ ನೇರವಾಗಿ ಸಂಬAಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದೆಂದು           ವಧು-ವರರ ಕುಟುಂಬದವರಿಗೆ  ತಿಳಿಸಲಾಗಿದೆ.

Please follow and like us:
error