ಮತ್ತೊಮ್ಮೆ ಲಾಕ್ ಡೌನ್ ತಜ್ಞರ ಸಮಿತಿ ತೀರ್ಮಾನದಂತೆ ಕ್ರಮ –  ಸಚಿವ ಬಿ.ಶ್ರೀರಾಮುಲು

ಮತ್ತೊಮ್ಮೆ ಲಾಕ್‌ಡೌನ್‌ ಮಾಡಬೇಕೇ ಬೇಡವೇ ಎಂದು ತೀರ್ಮಾನ ಮಾಡಲು ತಜ್ಞರ ಸಮಿತಿ ಇದೆ. ಅವರ ಸಲಹೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ಧಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು  ಕೋವಿಡ್‌19 ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ. ಕಾರ್ಮಿಕರು,ವ್ಯಾಪಾರಿಗಳು ಹೀಗೆ ವಿವಿಧ 15 ಕೆಟಗರಿ ಮಾಡಿ ಪರೀಕ್ಷೆಗಳನ್ನು ನಡೆಸಬೇಕಿದೆ. ಇದರಿಂದ ಸೋಂಕು ಸಮುದಾಯಕ್ಕೆ ಹರಡಿದೆಯೋ ಇಲ್ಲವೇ ಎಂಬುದು ತಿಳಿಯಲಿದೆ. ಸೋಮವಾರ ಟಾಸ್ಕ್‌ಫೋರ್ಸ್‌ ಸಭೆ ಇದೆ. ಈ ಸಭೆಯಲ್ಲಿ ಎಲ್ಲವನ್ನು ಚರ್ಚೆ ಮಾಡಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ ಪರೀಕ್ಷೆ ಆರಂಭವಾಗುತ್ತಿದೆ. ಪರೀಕ್ಷಾ ಕೊಠಡಿಗಳಲ್ಲಿ ವ್ಯಕ್ತಿಗತ ಅಂತರ, ಮಾಸ್ಕ್‌ ಬಳಕೆ ಕಡ್ಡಾಯ. ಕೊರೊನ ಸೋಂಕಿನ ಬಗ್ಗೆ ಮಕ್ಕಳು ಹಾಗೂ ಪೋಷಕರು ಯಾವುದೇ ಭಯಪಡಬೇಕಿಲ್ಲ. ಶಿಕ್ಷಣ ಸಚಿವರಾದ ಎಸ್‌ ಸುರೇಶ್‌ ಕುಮಾರ್‌ ಅವರೊಂದಿಗೆ ಈಗಾಗಲೇ ಸಾಕಷ್ಟು ಸಭೆ ನಡೆಸಲಾಗಿದೆ. ಮಕ್ಕಳ ಸುರಕ್ಷತೆಗೆ ಗಮನ ನೀಡಲಾಗುವುದು. ಕಂಟೈನ್‌ಮೆಂಟ್‌ ವಲಯಗಳಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಲಾಗುವುದು ಎಂದು ಹೇಳಿದರು

Please follow and like us:
error