ಮತ್ತೊಮ್ಮೆ ಕರಡಿ ಸಂಗಣ್ಣ ನವರು ಸಂಸದರಾಗಬೇಕು- ಸಿ ವಿ ಚಂದ್ರಶೇಖರ್

Koppal ಕೊಪ್ಪಳ ತಾಲೂಕಿನ ಕವಲೂರು, ಅಳವಂಡಿ, ಬೆಟಗೇರಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ಮಾತನಾಡಿದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸಿ ವಿ ಚಂದ್ರಶೇಖರ ಬಿಜೆಪಿಗೆ ತಮ್ಮ ಮತಗಳನ್ನು ನೀಡಬೇಕು ದೇಶಕ್ಕೆ ಸಮರ್ಥ ಸಾರಥಿಯನ್ನು ನೀಡಿದ ಬಿಜೆಪಿ ಪಕ್ಷಕ್ಕೆ ನಿಮ್ಮ ಮೊದಲ ಆದ್ಯತೆ ನೀಡಬೇಕು ದೇಶಕ್ಕೆ ಮೋದಿ ಕೊಪ್ಪಳಕ್ಕೆ ಸಂಗಣ್ಣ ಎಂಬ ಘೋಷಣೆ ಕ್ಷೇತ್ರದ ತುಂಬೆಲ್ಲ ಮೊಳಗಬೇಕು. ಈ ಚುನಾವಣೆ ರಾಷ್ಟ್ರದ ಏಳ್ಗೆಯ ಚುನಾವಣೆಯಾಗಿದ್ದು ಜಗತ್ತಿನೆದುರು ಭಾರತದ ಸತ್ವವನ್ನು ತೋರಿ ನಮ್ಮ ದೇಶದ ಗೌರವವನ್ನು ಎತ್ತಿ ಹಿಡಿದ ನರೇಂದ್ರ ಮೋದಿಜಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಅದೇ ರೀತಿ ಮತ್ತೊಮ್ಮೆ ಕರಡಿ ಸಂಗಣ್ಣ ನವರು ಸಂಸದರಾಗಬೇಕು ಆದ್ದರಿಂದ ಅವರಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ ಮತ್ತೊಮ್ಮೆ ತಮ್ಮ ಸೇವೆಯ ಮಾಡುವ ಅವಕಾಶ ನೀಡಬೇಕು ಎಂದರು.

ನಂತರ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಗಣ್ಣ ಕರಡಿ ಮಾತನಾಡಿ ನರೇಂದ್ರ ಮೋದಿಯವರ ಜನಧನ ಯೋಜನೆ, ಸ್ವಚ್ಛ ಭಾರತ ಯೋಜನೆ, ಅಯೂಸ್ಮಾನ್ ಭಾರತ ಯೋಜನೆ ಹೀಗೆ ಹತ್ತು ಹಲವಾರು ಜನಪರ ಯೋಜನೆಗಳನ್ನು ನೀಡುವುದರ ಜೊತೆಗೆ ಭಾಗ್ಯನಗರ ಮೇಲ್ಸೇತುವೆ, ಕಿನ್ನಾಳ ಕೆಳಸೇತುವೆ, ರಸ್ತೆ ನಿರ್ಮಾಣದಂತ ಅನೇಕ ಕಾರ್ಯಗಳನ್ನು ನಿಮ್ಮ ಆಶೀರ್ವಾದದಿಂದ ಮಾಡಿದ್ದೆನೇ ಮುಂದೆಯೂ ಕೂಡ ತಮ್ಮ ಸೇವೆಗಾಗಿ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆಗೆ ಅವಕಾಶ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಅಪ್ಪಣ್ಣ ಪದಕಿ, ವೈಜನಾಥ, ಸಂಗಪ್ಪ ವಕ್ಕಲದ, ಡಿ.ಮಲ್ಲಣ್ಣ, ಹಾಲೇಶ ಕಂದಾರಿ, ವಿರೇಶ ಸಜ್ಜನ್, ವಿರುಪಾಕ್ಷಪ್ಪ ಬಾರಕೇರ, ಸಂಗಮೇಶ ಡಂಬಳ, ಶರಣಪ್ಪ ಮತ್ತೂರ, ನಾಗಪ್ಪ ಮಾಸ್ಟರ್ ಸವಡಿ, ಶ್ರೀಮತಿ ಸುನಂದಮ್ಮ ಗದ್ದಿಕೇರಿ, ಶ್ರೀಮತಿ ಸುಮಾ ಕರ್ಕಿಹಳ್ಳಿ, ಈಶಪ್ಪ ಮಾದಿನೂರ, ವಿ.ಎಂ ಬೂಸನೂರಮಠ, ಸುರೇಶ ದಾಸರೆಡ್ಡಿ, ಫಕೀರಪ್ಪ ಆರೇರ್,ಪ್ರಶಾಂತ್ ರಾಯ್ಕರ್, ಚಂದ್ರಪ್ಪ ಜಂತ್ಲಿ, ಈಶಣ್ಣ ಗದ್ದಿಕೇರಿ, ಬಸವರಾಜ್ ರಡ್ಡೇರ್, ಜಗದೀಶಗೌಡ ತೆಗ್ಗಿನಮನಿ, ಮಲ್ಲಪ್ಪ ಬೇಲೇರಿ, ಶಂಕರಗೌಡ ಬೆಳಗಟ್ಟಿ ಸೇರಿದಂತೆ ಪಕ್ಷದ ಹಿರಿಯರು, ಕಾರ್ಯಕರ್ತರು ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮತಯಾಚನೆ ಮಾಡಿದರು..

Please follow and like us:
error