ಕೊಪ್ಪಳ;ಏಪ್ರಿಲ್-:ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನವು ಏಪ್ರಿಲ್ 23 ರಂದು ನಡೆಯಲಿದ್ದು
ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ಮತ್ತು ಮೊಬೈಲ್ ಬಳಕೆಗೆ
ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್
ತಿಳಿಸಿದ್ದಾರೆ.
ಮತದಾನ ನಡೆಯುವ ದಿನ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951 ರ
ಕಲಂ 130 ರನ್ವಯ ಮತಗಟ್ಟೆ ಒಳಗೆ ಅಥವಾ ಮತಗಟ್ಟೆಗಳ 100 ಮೀಟರ್ ಸುತ್ತಮುತ್ತಲೂ
ಯಾವುದೇ ಸರ್ಕಾರಿ ಅಥವಾ ಖಾಸಗಿ ಸ್ಥಳಗಳಲ್ಲಿ ಪ್ರಚಾರ ಮಾಡುವಂತಿಲ್ಲ. ಹಾಗೂ
ಧ್ವನಿವರ್ಧಕಗಳು, ಮೆಗಾಪೋನ್ಗಳು, ಇತ್ಯಾಧಿಗಳ ಬಳಕೆ ನಿಷೇಧಿಸಲಾಗಿದೆ. ಯಾವುದೇ ಸಾಧನದ
ಮೂಲಕ ಧ್ವನಿಯನ್ನು ವರ್ಧಿಸುವುದು, ಅನುಚಿತ ರೀತಿಯಲ್ಲಿ ಕೂಗಾಡುವುದನ್ನು ಸಹ
ನಿಷೇಧಿಸಲಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪರಿಕರಗಳನ್ನು ಮುಟ್ಟುಗೋಲು
ಹಾಕಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಮತ್ತು 100 ಮೀಟರ್ ವ್ಯಾಪ್ತಿಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ ಪಿ.ಆರ್.ಓ
ಹೊರತುಪಡಿಸಿ ಬೇರೆ ಯಾರಿಗೂ ಮೊಬೈಲ್ ಫೋನ್, ಟ್ಯಾಬ್ಲೇಟ್, ಕಾರ್ಡ್ಲೆಸ್ ಪೋನ್ ಬಳಸಲು
ಅನುಮತಿ ಇರುವುದಿಲ್ಲ. ಮತದಾರರು ಮತದಾನ ಮಾಡಲು ಆಗಮಿಸುವಾಗ ತಮ್ಮ ಮೊಬೈಲ್
ಫೋನ್ಗಳನ್ನು ಮನೆಯಲ್ಲಿಯೇ ಇರಿಸಿ ಮತದಾನಕ್ಕೆ ಆಗಮಿಸಿ ಮತದಾನ ಮಾಡಲು ಕೋರಲಾಗಿದೆ.
ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ಮೊಬೈಲ್ ಬಳಕೆಗೆ ಅವಕಾಶ ಇಲ್ಲ
Please follow and like us: