ಮತಗಟ್ಟೆಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್; SP ಟಿ.ಶ್ರೀಧರ್


  ಎರಡನೇ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಯುವ ಮತಗಟ್ಟೆಗಳಿಗೆ ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿನ ಒಟ್ಟು 645 ಮತಗಟ್ಟೆಗಳಿಗೆ 3 ಡಿಎಸ್‌ಪಿ, 10 ಜನ ಸಿಪಿಐ, 20 ಜನ ಪಿಎಸ್‌ಐ, 41 ಜನ ಎಎಸ್‌ಐ, 422 ಜನ ಮುಖ್ಯ ಪೇದೆಗಳು ಹಾಗೂ ಪೊಲೀಸ್ ಪೇದೆಗಳು ಮತ್ತು 290 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 786 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ 8 ಡಿಎಆರ್ ತುಕಡಿ ಹಾಗೂ 3 ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾಹಿತಿ ನೀಡಿದರು.
ತಾಲ್ಲೂಕುವಾರು ವಿವರ ;
  ಈ ಪೈಕಿ ಗಂಗಾವತಿ ತಾಲ್ಲೂಕಿನ 159 ಮತಗಟ್ಟೆಗಳಿಗೆ 1 ಡಿಎಸ್‌ಪಿ, 3 ಜನ ಸಿಪಿಐ, 6 ಜನ ಪಿಎಸ್‌ಐ, 10 ಜನ ಎಎಸ್‌ಐ, 112 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 78 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 210 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 1 ಕೆ.ಎಸ್.ಆರ್.ಪಿ ಹಾಗೂ 2 ಡಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ.
  ಕನಕಗಿರಿ ತಾಲ್ಲೂಕಿನ 89 ಮತಗಟ್ಟೆಗಳಿಗೆ 1 ಡಿಎಸ್‌ಪಿ, 2 ಜನ ಸಿಪಿಐ, 4 ಜನ ಪಿಎಸ್‌ಐ, 7 ಜನ ಎಎಸ್‌ಐ, 43 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 24 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 81 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.1 ಕೆ.ಎಸ್.ಆರ್.ಪಿ ಹಾಗೂ 1 ಡಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿದೆ.
ಕಾರಟಗಿ ತಾಲ್ಲೂಕಿನ 97 ಮತಗಟ್ಟೆಗಳಿಗೆ 2 ಜನ ಸಿಪಿಐ, 4 ಜನ ಪಿಎಸ್‌ಐ, 7 ಜನ ಎಎಸ್‌ಐ, 63 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 45 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 121 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 1 ಡಿಎಆರ್ ತುಕುಡಿಯನ್ನು ನಿಯೋಜಿಸಲಾಗಿದೆ.
ಕುಷ್ಟಗಿ ತಾಲ್ಲೂಕಿನ 300 ಮತಗಟ್ಟೆಗಳಿಗೆ  1 ಡಿಎಸ್ಪಿ, 3 ಜನ ಸಿಪಿಐ, 6 ಜನ ಪಿಎಸ್‌ಐ, 17 ಜನ ಎಎಸ್‌ಐ, 204 ಮುಖ್ಯ ಪೇದೆಗಳು ಹಾಗೂ ಪೇದೆಗಳು ಮತ್ತು 143 ಗೃಹ ರಕ್ಷಕ ದಳದ ಸಿಬ್ಬಂದಿಗಳು ಸೇರಿ ಒಟ್ಟು 374 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ 1 ಕೆಎಸ್.ಆರ್.ಪಿ ಹಾಗೂ 2 ಡಿಎಆರ್ ತುಕುಡಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದರು.

Please follow and like us:
error