ಮಟ್ಕಾ ,ಇಸ್ಪೇಟ್ ಜೂಜಾಟ ದಾಳಿ

ಅಳವಂಡಿ : ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಸರಹಳ್ಳಿ ಸೀಮಾದಲ್ಲಿ ಬರುವ ದುರ್ಗಪ್ಪ ಪೂಜಾರ ಇವರ ಹೊಲದ ಹತ್ತಿರ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 11 ಜನ ಆರೋಪಿತರು ಇಸ್ರೇಟ್ ಜೂಜಾಟದಲ್ಲಿ ತೊಡಗಿದ್ದಾಗ ಚಂದ್ರಪ್ಪ ಹೆಚ್ . ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟದ ನಗದು ಹಣ ರೂ . 2270 = 00 ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ .

ಮಟ್ಕಾ ಜೂಜಾಟ ದಾಳಿ . ದಿ 06-04-2021 ರಂದು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ಜನಾಳ ಗ್ರಾಸ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನಾದ ಹನಮಗೌಡ ತಂದ ಛತ್ರಗೌಡ ಮಾಲಿಗೌಡ್ರ , ವಯಾ 52 ವರ್ಷ , ಜಾತಿ , ಕುರುಬರ , : ಒಕ್ಕಲುತನ , ಸಾ ; ಗರ್ಜನಾಳ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ರು.ಗೀತಾಂಜಲಿ ಶಿಂಧೆ . ಪಿ.ಎಸ್.ಐ ತಾವರಗೇರಾ ಪೊಲೀಸ್ ಠಾಣೆ ಠಾಣೆ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ನಗದು ಹಣ 1185 = 00 , ರೂ ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ . ದಿನಾಂಕ – 06-04-2021 ರಂದು ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಡೇಲಿ ಮಾರ್ರೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1 ] ಮಂಜುನಾಥ ತಂದ ಅಯ್ಯನಗೌಡ ಪೊಲೀಸ್ ಪಾಟೀಲ್ , ವಯಾ -32 ವರ್ಷ , ಜಾಲಿಂಗಾಯತ , ಸಾಡಣಾಪುರ , ತಾ.ಗಂಗಾವತಿ , 2 ] ಖಾಜಾಮೈನುದ್ದೀನ್ ತಂದೆ ರಾಜೇಸಾಬ ದನಕಾಯೋರು , ವಯಾ : 40 ವರ್ಷ , ಜಾಮುಸ್ಲಿಂ , ಸಾ ವಾಲ್ಮೀಕಿ ಸರ್ಕಲ್ ಹತ್ತಿರ , ಬೆಂಡರವಾಡಿ , ಗಂಗಾವತಿ ರವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ವೆಂಕಟಸ್ವಾಮಿ … , ಪಿಐ , ಗಂಗಾವತಿ ನಗರ ಠಾಣೆರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ನಗದು ಹಣ 4,330 = 00 ರೂ ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

Please follow and like us:
error