ಮಕ್ಕಳೇ ಧೈರ್ಯವಾಗಿ ಶಾಲೆಗೆ ಬನ್ನಿ -ಕೊರೊನಾ ಬಗ್ಗೆ ಜಾಗೃತಿ ಇರಲಿ – ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ

ಮಕ್ಕಳೇ ಧೈರ್ಯವಾಗಿ ಶಾಲೆಗೆ ಬನ್ನಿ, ಆದಾಗ್ಯೂ ಕೊರೊನಾ ಬಗ್ಗೆ ಜಾಗೃತಿ ಇರಲಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ವಿದ್ಯಾರ್ಥಿಗಳಿಗೆ ಕಿ(ಸ)ವಿ ಮಾತು ಹೇಳಿದರು.

ಕುಷ್ಟಗಿಯ ಬಾಲಕಿಯರ ಸರಕಾರಿ ಪ್ರೌಢ ಶಾಲೆಯಲ್ಲಿ ಗುಲಾಬಿ ಪುಷ್ಪ ನೀಡುವ ಮೂಲಕ ವಿದ್ಯಾರ್ಥಿನಿಯರನ್ನು ಶಾಲೆಗೆ ಸ್ವಾಗತಿಸಿ ಮಾತನಾಡಿ
ಕೋವಿಡ್- 19 ಸಂಕಷ್ಟದ ಸಮಯ ಮುಗಿತಾ ಬಂದಿದೆ ಶಾಲೆ ಶೈಕ್ಷಣಿಕ ಪರಿಸರದಿಂದ ಬಹುಕಾಲ ದೂರವಿದ್ದ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ವಿದ್ಯಾಗಮ 2.0 ಮತ್ತು 10ನೇ ತರಗತಿಗಳು ಆರಂಭವಾಗಿದ್ದು 10ನೇ ತರಗತಿಯ ಎಲ್ಲಾ ಮಕ್ಕಳು ಹಾಗೂ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಇನ್ನು ಮುಂದೆ ಕೋವಿಡ್-19 ಭಯವಿಲ್ಲದೆ ಧೈರ್ಯವಾಗಿ ಶಾಲೆಗೆ ಬನ್ನಿ ಆದರೆ ಹೊಸ ಅಲೆಯ ಬಗ್ಗೆಯೂ ಸದಾಕಾಲ ಎಚ್ಚರವಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಲ್ಲಾ ವಿದ್ಯಾರ್ಥಿಗಳೂ ಶಾಲೆಗೆ ಹಾಜರಾಗಲು ಬಸ್ ಹಾಗೂ ಹಾಸ್ಟೆಲ್ ಗಳ ಪ್ರಾರಂಭದ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ನಾನೂ ಕೂಡಾ ಈ ಬಗ್ಗೆ ಮತ್ತೊಮ್ಮೆ ಸಂಬಂಧಿಸಿದವರಿಗೆ ತಿಳಿಸಲು ಹೇಳಿದರು. ಹಿಂದಿನ ಪಾಸ್ ತೋರಿಸಿ ಒಂದು ತಿಂಗಳುಗಳ ಕಾಲ ಯಾವುದೇ ಬಸ್ ಚಾರ್ಜ್ ಇಲ್ಲದೆ ಉಚಿತ ಪ್ರಯಾಣ ಮಾಡಲು ಅವಕಾಶವಿದ್ದು ಅದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಲು ತಿಳಿಸಿದರು. ಹಾಗೆಯೇ ಹಾಸ್ಟೆಲ್ ಆರಂಭದ ಕುರಿತು ಸರ್ಕಾರದೊಂದಿಗೆ ಮನವಿ ಮಾಡುವುದಾಗಿ ಹೇಳುತ್ತಾ, ಪ್ರತಿಯೊಬ್ಬ ವಿದ್ಯಾರ್ಥಿಗಳು ಧೈರ್ಯವಾಗಿ ಶಾಲೆಗೆ ಬರಲು ಸುರಕ್ಷತಾ ಕ್ರಮಗಳನ್ನು ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಉತ್ತಮವಾಗಿ ಅಧ್ಯಯನದಲ್ಲಿ ತೊಡಗಿಕೊಂಡು ಅಧ್ಯಾಪಕರ ಸಹಾಯ, ಸಹಕಾರವನ್ನು ಪಡೆದು ತಮ್ಮ ಶೈಕ್ಷಣಿಕ ಜೀವನವನ್ನು ಕಟ್ಟಿಕೊಳ್ಳಲು ಕಿವಿಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ ಮಗ್ಗದವರು ಮಾತನಾಡಿ ಕೋವಿಡ್ -19ರ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯಚರಣಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಮೂಲಕ ವಿದ್ಯಾಗಮ 2.0 ಹಾಗೂ 10ನೇ ತರಗತಿಯ ತರಗತಿಗಳನ್ನು ಆರಂಭಿಸುವ ಮತ್ತು ಶಾಲೆಗೆ ಬರುವ ಮಕ್ಕಳಿಗೆ ಮಾನಸಿಕ ಸ್ಥೈರ್ಯ ಉತ್ತಮ ಶೈಕ್ಷಣಿಕ ಮಾರ್ಗದರ್ಶನ ನೀಡುವುದರ ಮೂಲಕ ಶೈಕ್ಷಣಿಕರಂಗವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಲು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಶೈಲ ಸೋಮನಕಟ್ಟಿ, ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಾಗಪ್ಪ ಬೆಳಿಯಪ್ಪನವರ, ಪ್ರಭಾರಿ ಮುಖ್ಯೋಪಾಧ್ಯಾಯರಾದ ಶಿವಯೋಗಪ್ಪ, ಬಿ.ಆರ್.ಪಿ. ಜೀವನ್ ಸಾಬ್ ಬಿನ್ನಾಳ, ಶಿಕ್ಷಕರಾದ ಡಾ. ಶರಣಪ್ಪ ನಿಡಶೇಸಿ, ಸುಭಾಸ ನಿಡಸನೂರ, ರೇವಣಸಿದ್ದಪ್ಪ ಅಂಗಡಿ, ಬಿ.ಕೆ. ವಾರದ, ಅಕ್ಕಮಹಾದೇವಿ. ನಾಗರತ್ನ, ವಿಜಯಲಕ್ಷ್ಮಿ, ನಾಗರಾಜ ಯಲಿಗಾರ, ಮಾರುತಿ ಹಾಗೂ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.

Please follow and like us:
error