ಮಕ್ಕಳಿಗೆ ಲಸಿಕೆಗಳು ತಲುಪುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಿ : ವಿಕಾಸ್ ಕಿಶೋರ್ ಸುರಳ್ಕರ್

ಕೋವಿಡ್-19 ಲಸಿಕಾ ಹಾಗೂ ಪಲ್ಸ್ ಪೋಲಿಯೋ : ಜಾಗೃತಿ ಸಮನ್ವಯ ಸಮಿತಿ ಸಭೆಯ

ಕೊಪ್ಪಳ,  : ಕೋವಿಡ್-19 ಲಸಿಕಾ ಹಾಗೂ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಇರುವ ಮಕ್ಕಳಿಗೆ ಲಸಿಕೆಗಳು ತಲುಪುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್-19 ಲಸಿಕಾ ಕಾರ್ಯಕ್ರಮದ ಹಾಗೂ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು (ಡಿ.16) ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಲಸಿಕಾ ಕಾರ್ಯಕ್ರಮದ ಹಾಗೂ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಎಲ್ಲಾ ಅಧಿಕಾರಿಗಳು ನಿರ್ಲಕ್ಷವಹಿಸದೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ಎಲ್ಲಾ ರೀತಿಯ ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.  ಅಲ್ಲದೇ ಎಲ್ಲಾ ಇಲಾಖೆಯವರು ಒಟ್ಟಾಗಿ ಸೇರಿ ಕಾರ್ಯಕ್ರಮವನ್ನು ಶೇ. 100 ರಷ್ಟು ಪ್ರಗತಿ ಸಾಧಿಸುವಲ್ಲಿ ಸಹಕರಿಸಬೇಕು.  ಕೊಪ್ಪಳ ಜಿಲ್ಲೆಯ ಕಾಮಗಾರಿ ಪ್ರದೇಶಗಳು, ಕೊಳಚೆ ಪ್ರದೇಶಗಳು, ತಾತ್ಕಾಲಿಕ ವಾಸಪ್ರದೇಶಗಳು, ಇಟ್ಟಂಗಿ ಬಟ್ಟಿಯಲ್ಲಿರುವ ಮಕ್ಕಳ ಸಂಖ್ಯೆಯನ್ನು ಪತ್ತೆಹಚ್ಚಿ ಯಾವುದೇ ಪ್ರದೇಶದ ಮಕ್ಕಳು ಲಸಿಕೆಯಿಂದ ವಂಚಿತರಾಗದಿರಲಿ.  ಹೆಚ್ಚು ಮಕ್ಕಳಿರುವ ಪ್ರದೇಶಗಳಲ್ಲಿ ಪೋಲಿಯೋ ಬೂತ್‌ಗೆ ಬೇಕಾಗಿರುವ ವ್ಯವಸ್ಥೆಯನ್ನು ಮಾಡಿಕೊಳ್ಳಿ ಹಾಗೂ ಕಳೆದ ವರ್ಷದಲ್ಲಿ ಯಾವ ಪ್ರದೇಶದಲ್ಲಿ ಅತಿ ಕಡಿಮೆ ಪ್ರಗತಿಯನ್ನು ಸಾಧಿಸಲಾಗಿದೆಯೋ ಅಂತಹ ಪ್ರದೇಶಗಳನ್ನು ಹೆಚ್ಚಿನ ರೀತಿಯಲ್ಲಿ ಗಮನಹರಿಸಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಹಾಗೂ ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಜಂಬಯ್ಯ ಬಿ. ಅವರು ಮಾತನಾಡಿ, ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ವಿವರಿಸುತ್ತಾ, 1985 ರಿಂದ ಇಲ್ಲಿಯವರೆಗೆ ಪೋಲಿಯೋ ನಿರ್ಮೂಲನೆಯಲ್ಲಿ ಜಾಗತಿಕ ಮಟ್ಟದಲ್ಲಿ ಪೋಲಿಯೋ ನಿರ್ಮೂಲನೆಗೆ ಕೈಗೊಂಡAತಹ ಕ್ರಮಗಳು ಮತ್ತು ಪೋಲಿಯೋ ಪ್ರಕರಣಗಳ ಏರಿಳಿತಗಳ ಬಗ್ಗೆ ಮಾಹಿತಿ ನೀಡುತ್ತಾ, 2019ರಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್‌ದಲ್ಲಿ ಅತಿಹೆಚ್ಚು ಪೋಲಿಯೋ ಪ್ರಕರಣಗಳು ಕಂಡು ಬಂದಿದ್ದರಿAದ 2019ರಲ್ಲಿ ಮುಗಿಯಬೇಕಾಗಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು 2023ರವರೆಗೆ ಮುಂದಿವರಿಸಲಾಗುತ್ತಿದೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯೂ ಕಣ್ಗಾವಲು ವ್ಯವಸ್ಥೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ಅವರು ಮಾತನಾಡಿ, ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ 200 ಕ್ಕಿಂತ ಹೆಚ್ಚು ಮಕ್ಕಳಿದಲ್ಲಿ, ಅಂತಹ ಸ್ಥಳಗಳಲ್ಲಿ ಹೆಚ್ಚುವರಿ ಪೋಲಿಯೊ ಬೂತ್ ವ್ಯವಸ್ಥೆಯನ್ನು ಮಾಡಲಾಗುವುದು ಹಾಗೂ ಈ ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವುದರಿಂದ ಸಾಮಾಜಿಕ ಅಂತರ ಹಾಗೂ ಸ್ಯಾನಿಟೇಸರ್ ಮತ್ತು ಮಾಸ್ಕ ಧರಿಸುವುದು, ಪೋಲಿಯೋ ಬೂತ್‌ನಲ್ಲಿ ಜನಸಂದಣಿಯಿAದ ಕೂಡದಂತೆ ಒಂದು ಸಲಕ್ಕೆ ಕೇವಲ 05 ಮಕ್ಕಳಿಗೆ ಲಸಿಕೆ ಹಾಕಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಪಕ್ಷಿ ನೋಟದ ಮಾಹಿತಿಯನ್ನು ನೀಡುತ್ತಾ,  ಕಳೆದ ಜನವರಿ-2020 ನಲ್ಲಿ ನಡೆದ ಪೋಲಿಯೋ ಕಾರ್ಯಕ್ರಮದಲ್ಲಿ 183863 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಅದರಲ್ಲಿ ಕೊಪ್ಪಳ ತಾಲೂಕಿನಲ್ಲಿ 52729  ಮಕ್ಕಳಿಗೆ, ಗಂಗಾವತಿ ತಾಲೂಕಿನಲ್ಲಿ 57102 ಮಕ್ಕಳಿಗೆ, ಕುಷ್ಟಗಿ ತಾಲೂಕಿನಲ್ಲಿ 39720 ಮಕ್ಕಳಿಗೆ, ಯಲಬುರ್ಗಾ ತಾಲೂಕಿನಲ್ಲಿ 34312 ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಾಲೂಕಾವಾರು ಮಾಹಿತಿಯನ್ನು ನೀಡಿದರು ಹಾಗೂ ಕಳೆದ ಸುತ್ತಿನಲ್ಲಿ 307943 ಮನೆಗಳಿಗೆ ಭೇಟಿ ನೀಡಿ ಪೋಲಿಯೋ ಲಸಿಕೆಯನ್ನು ನೀಡಲಾಗಿದೆ.  ಈ ವರ್ಷದ ಪೋಲಿಯೊ ಸುತ್ತಿನಲ್ಲಿ ಮೊಬೈಲ್ ತಂಡಗಳು, ಟ್ರಾನ್ಸಿಟ್ ತಂಡಗಳು, ಪೋಲಿಯೋ ಬೂತ್ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ಆರ್.ಸಿ.ಹೆಚ್. ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ರವರು ಮಾತನಾಡಿ, ಮುಂದಿನ ದಿನಗಳಲ್ಲಿ ಕೋವಿಡ್-19 ಲಸಿಕೆ ಬಿಡುಗಡೆಯಾಗುತ್ತಿರುವುದರಿಂದ ಈ ಲಸಿಕೆಯನ್ನು ಹಾಕಲು ಯಾವ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಅದಕ್ಕೆ ಇರುವ ಮಾರ್ಗಸೂಚಿಯ ಬಗ್ಗೆ ತಿಳಿಸುತ್ತಾ, ಎನ್.ಇ.ಜಿ.ವಿ.ಎ.ಸಿ ಮಾರ್ಗಸೂಚಿಯ ಪ್ರಕಾರ ಕೋವಿಡ್ ಲಕ್ಷಣವಿರುವ ವ್ಯಕ್ತಿಗಳಿಗೆ ಎರಡು ಬಾರಿ ಲಸಿಕೆಯನ್ನು ನೀಡಬೇಕು.  ಈ ಲಸಿಕೆಯನ್ನು +2 ರಿಂದ +8 ಉಷ್ಣತೆಯಲ್ಲಿ ನೀಡುವುದು ಹಾಗೂ ಈ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ದಿನದಂದು ಮಾಡದೆ ಉಳಿದ ದಿನಗಳಲ್ಲಿ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು.  ಮೊದಲನೇ ಹಂತದಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ/ಅರೇ ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ನೀಡಲಾಗುವುದರಿಂದ ಅಂತಹ ಫಲಾನುಭವಿಗಳ ವಿವರವನ್ನು ಈಗಾಗಲೇ ಕೋವಿಡ್ ಆ್ಯಪ್‌ನಲ್ಲಿ ಶೇ. 100 ರಷ್ಟು ಇಂದೀಕರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಇರ್ಫಾನಾ ಅಂಜುಮ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹೇಶ ಎಂ.ಜಿ., ಭಾರತೀಯ ವೈದ್ಯಕೀಯ ಸಂಘ ಕೊಪ್ಪಳದ ಕಾರ್ಯದರ್ಶಿ ಡಾ. ಹನುಮಂತಪ್ಪ, ತಾಲ್ಲೂಕಾ ಆರೋಗ್ಯಾಧಿಕಾರಿಗಳಾದ ಕೊಪ್ಪಳದ ಡಾ. ರಾಮಾಂಜನೇಯಾ, ಗಂಗಾವತಿಯ ಡಾ. ಗೌರಿಶಂಕರ, ಕುಷ್ಟಗಿಯ ಡಾ. ಆನಂದ್ ಗೋಟೂರು, ಯಲಬುರ್ಗಾದ ಡಾ. ಮಂಜುನಾಥ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಾಹಾದೇವಿ ಕೆ.ಹೆಚ್., ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದೊಡ್ಡಬಸಪ್ಪ ಎನ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದರು.

Please follow and like us:
error