ಮಂಡಿಯೂರಿ ಕುಳಿತು ಸೋಂಕಿತನನ್ನು ಕೋವಿಡ್ ಕೇರ್ ಸೆಂಟರ್ ಗೆ ಆಹ್ವಾನಿಸಿದ ಅಧಿಕಾರಿಗಳು

ಕೊಪ್ಪಳ : ಸೋಂಕಿತನೋರ್ವನನ್ನು ಕ್ವಾರಂಟೈನ್ಗೆ ಆಗಮಿಸುವಂತೆ ಆಗ್ರಹಿಸಿ ಅಧಿಕಾರಿಗಳೇ ಸೋಂಕಿತನ ಮನೆ ಮುಂದೆ ಮಂಡಿಯೂರಿ ಪರಿಪರಿಯಾಗಿ ಕೇಳಿಕೊಂಡ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ಬರುತ್ತಿದೆ. ಇದರಿಂದ ಹೊಂ ಐಸೋಲೇಷನ್ ನಲ್ಲಿ ಇರುತ್ತೇನೆ ಎಂದ ಸೋಂಕಿತನಿಗೆ ಅಧಿಕಾರಿಗಳು ಮನೆಯಲ್ಲಿಯೇ ಇದ್ದು, ಇನ್ನೊಬ್ಬರಿಗೆ ಸೋಂಕು ತಗುಲುವುದು ಬೇಡ, ದಯವಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಬನ್ನಿ ಎಂದು ತಾಲೂಕು ಪಂಚಾಯತ್ ಇಒ ಡಾ.ಡಿ ಮೋಹನ್ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಸೋಂಕಿತನ ಮನೆ ಮುಂದೆ ಮಂಡಿಯೂರಿ ಮನವಿ ಮಾಡಿದ್ದಾರೆ. ಇನ್ನು ಯಾವುದೇ ಕೊರೊನಾ ಗುಣಲಕ್ಷಣಗಳು ಇಲ್ಲದೆ ಇರೋ ಸೋಂಕಿತರು ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಯಾವುದೇ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೇಯುವಂತಿಲ್ಲ. ಬದಲಾಗಿ ಸರ್ಕಾರದ ಕೊವೀಡ್ ಕೇರ್ ಸೆಂಟರ್ ಗೆ ಬನ್ನಿ ಎಂದು ಜಿಲ್ಲಾಡಳಿತ ಆದೇಶ ಮಾಡಿದೆ. ಇದರಿಂದ ಕೋವಿಡ್ ಕೇರ್ ಸೆಂಟರ್ ಗೆ ಬಾರದ ಸೊಂಕೀತರನ್ನು ಅಧಿಕಾರಿಗಳು ಈ ರೀತಿ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ..

Please follow and like us:
error