ಮಂಗಳೂರು ಹೊರವಲಯ : ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಮಂಗಳೂರು : ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಬಳಿಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.ನಂದಿನಿ ಹಾಗೂ ಶಾಂಭವಿ ನದಿಗಳು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದ ಕೃಷಿ ಭೂಮಿ ಸಂಪೂರ್ಣ ಮುಳುಗಡೆಯಾಗಿದ್ದು,ಭತ್ತದ ಬೆಳೆ ನೀರುಪಾಲಾಗಿದೆ.ಕಟೀಲು, ಮಿತ್ತಬೈಲು,ಕಿಲೆಂಜೂರು,ಪಂಜ, ಬಳ್ಕುಂಜೆ ಉಳೆಪಾಡಿ, ಏಳಿಂಜೆಯ ತಗ್ಗು ಪ್ರದೇಶದ ಕೃಷಿಭೂಮಿ ಸಂಪೂರ್ಣ ಮುಳುಗಡೆಯಾಗಿದೆ. ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳೀಯರು ಹಾಗೂ ಮೂಲ್ಕಿ ಗೃಹರಕ್ಷಕ ದಳ ಸಹಾಯದಿಂದ ದೋಣಿ ಮೂಲಕ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕರ್, ಗ್ರಾಮಕರಣಿಕ ಪ್ರದೀಪ್ ಶಣೈ, ಮೂಲ್ಕಿ ಪೋಲಿಸರು, ಜನಪ್ರತಿನಿಧಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

Please follow and like us:
error