ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಿಂದ ಕೊಪ್ಪಳದಲ್ಲಿ ಜಾಥಾ

ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ದಿ 14 ರಿಂದ ರಾಜ್ಯಾದ್ಯಂತ ಮೂರು ವಾಹನಗಳ ಜಾಥಾ ಪ್ರಾರಂಭವಾಗಿದ್ದು .ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಎಚ್ ಎಸ್ ದೊರೆ ಸ್ವಾಮಿ ನೇತೃತ್ವದಲ್ಲಿ ದಿನಾಂಕ 21-9-2020 ರಿಂದ 30 ರವರೆಗೆ ಬೆಂಗಳೂರಿನಲ್ಲಿ ಆಹೋರಾತ್ರಿ ಸತ್ಯಾಗ್ರಹ ನಡೆಯುತ್ತದೆ.

ಇಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳದ ಬಸ್ ನಿಲ್ದಾಣ ಹತ್ತಿರ ಜಾಥದ ಪ್ರಚಾರ ಸಭೆ ನಡೆಯಿತು.  ಜಿಲ್ಲೆಯ ಶಾಸಕರಾದ ರಾಘವೇಂದ್ರ ಹಿಟ್ನಾಳ, ಅಮರೆಗೌಡ ಬಯ್ಯಪುರ, ಹಾಲಪ್ಪ ಆಚಾರ, ಬಸವರಾಜ ದಡೆಸೂಗರು, ಪರಣ್ಣ ಮುನವಳ್ಳಿ ಇವರಿಗೆ ಒತ್ತಾಯಿಸಿ, ರೈತರಿಗೆ ಮರಣ ಶಾಸನವಾಗಲಿರುವ ಭೂ ಸುಧಾರಣೆ ಸುಗ್ರೀವಾಜ್ಞೆ, ಕೈಗಾರಿಕೆ, ವಿದ್ಯುತ್ ತಿದ್ದುಪಡಿ ಕಾಯ್ದೆ , ವರ್ತಕರಿಗೆ ಮಾರಕವಾಗುವ ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಲು ಬಿಡಬಾರದು ಎಂದು ಆಗ್ರಹಿಸಿದರು.

ಕರ್ನಾಟಕ ರೈತ ಸಂಘ (AIKKS) ರಾಜ್ಯಾಧ್ಯಕ್ಷರಾದ ಡಿ ಹೆಚ್ ಪೂಜಾರ್, TUCI ರಾಜ್ಯ ಉಪಾಧ್ಯಕ್ಷರಾದ ಕೆ.ಬಿ.ಗೋನಾಳ,
H.V. ರಾಜಬಕ್ಷಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೆಗಲ್, ಪರಶುರಾಮ, ಕಾಶಪ್ಪ ಚಲುವಾದಿ, ಕರ್ನಾಟಕ ವಿದ್ಯಾರ್ಥಿ ಸಂಘ KVS ದ ಗುರುಬಸವ ಬರಗೂರು, ಮರಿಸ್ವಾಮಿ, ನಾಗರಾಜ್ ಇತರರು ಇದ್ದರು.

 

Please follow and like us:
error