ಭೀಮಾ ನದಿ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

ಕುಷ್ಟಗಿ:ಭೀಮಾ ನದಿ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದರು. ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರವೂ ಭೀಮಾ ನದಿ ಪ್ರವಾಹದಿಂದ ನಲುಗಿರುವುದರಿಂದ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮನವಿ ಮಾಡಿದರು. ಕಳೆದ ಬಾರಿ ಕೃಷ್ಣಾ ತೀರದಲ್ಲಿ ಉಂಟಾದ ಪ್ರವಾಹ ಸಂತ್ರಸ್ತರಿಗೆ ಇದುವರೆಗೂ ಪರಿಹಾರ, ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಭೀಮಾ ಪ್ರವಾಹ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸಲು ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರ ಸಶಕ್ತವಾಗಿಲ್ಲ ಎಂದರು.ಪ್ರವಾಹ, ಅತಿವೃಷ್ಟಿಯಿಂದ ರೈತರಿಗೆ ಆಗಿರುವ ಹಾನಿಯನ್ನು ಯಾರಿಂದಲೂ ತುಂಬಿಕೊಡಲು ಸಾಧ್ಯವಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಕೇವಲ ಸಾಂತ್ವಾನದ ಮಾತುಗಳಿಗೆ ಸೀಮಿತವಾಗದೇ ಅಗತ್ಯ ನೆರವು ನೀಡಬೇಕು ಎಂದು ಹೇಳಿದರು.

2019–20ರ ಸಾಲಿನಲ್ಲಿ ಪ್ರವಾಹ ದಿಂದ ₹35,160 ಕೋಟಿ ಹಾನಿ ಉಂಟಾಗಿದೆ ಎಂದು ಸರ್ಕಾರ ಅಂದಾಜು ಮಾಡಿತ್ತು. ಆದರೆ, ಇದುವರೆಗೆ ಕೇವಲ ₹ 2,940 ಕೋಟಿಯಷ್ಟು ಮೊತ್ತದ ಪರಿಹಾರ ಕಾರ್ಯ ಮಾತ್ರ ನಡೆಸಿದೆ. ಮುಖ್ಯಮಂತ್ರಿ ಅವರು ಹಣದ ಕೊರತೆ ಇಲ್ಲ ಎನ್ನುತ್ತಿದ್ದಾರೆ. ಹಾಗಾದಲ್ಲಿ ಕಳೆದ ಬಾರಿ ಪ್ರವಾಹದಿಂದ ಆಗಿದ್ದ ₹ 35 ಸಾವಿರ ಕೋಟಿಯಷ್ಟು ನಷ್ಟವನ್ನು ಏಕೆ ಭರಿಸಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರದಿಂದ ರಾಜ್ಯದ ಸಿಗಬೇಕಿದ್ದ ಜಿಎಸ್‌ಟಿ ಪಾಲು ಕೂಡಾ ಬಂದಿಲ್ಲ. ರಾಜ್ಯದಲ್ಲಿರುವ ಬಿಜೆಪಿಯ 25 ಸಂಸದರು ಮತ್ತು ಇಲ್ಲಿನ ಕೇಂದ್ರ ಸಚಿವರಿಗೆ ಇಚ್ಛಾಶಕ್ತಿಯ ಕೊರತೆಯಿದೆ. ಕೇಂದ್ರ ಸರ್ಕಾರ ತಕ್ಷಣ ₹ 10 ಸಾವಿರ ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಟಾಚಾರದ ಪ್ರವಾಹ ವೀಕ್ಷಣೆ:  ಈಗ ಭೀಮ ನದಿ ನೀರು ಕಡಿಮೆಯಾಗಿದೆ ಎಲ್ಲ ಮುಗಿದ ನಂತರ ಸಿಎಂ ವೈಮಾನಿಕ ಸಮೀಕ್ಷೆ ನೋಡುವುದು ಪ್ರಯೋಜನವಿಲ್ಲ. ಜನರು ಅಪೇಕ್ಷ ಪರಿಹಾರ ಮಾತ್ರ ಎಂದು ಪ್ರವಾಹಪೀಡಿತ ಗ್ರಾಮಗಳು ಜನರನ್ನು ತೋಡಿಕೊಂಡಿದ್ದಾರೆ ಮತ್ತು ಎಲ್ಲಾ ಮುಗಿದ ನಂತರ ನಿಮ್ಮ ಸಮೀಕ್ಷೆಯ ಪ್ರಯೋಜನವಿಲ್ಲ ನಮ್ಮ ನೋವನ್ನು ನೋಡಲು ಸಾಧ್ಯವಿಲ್ಲ.

ಪ್ರವಾಹ ಪರಿಸ್ಥಿತಿಯ ವೀಕ್ಷಣೆಗ ಬಂದಿರುವ ಸಚಿವರು ಈ ಭಾಗದ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸಬೇಕು. ಪ್ರವಾಹ ಸಮಸ್ಯೆ ನಿವಾರಿಸುವ, ಪರಿಹಾರ ಘೋಷಿಸುವ ಮತ್ತು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು.ಆದರೆ, ಇದ್ಯಾವುದನ್ನು ಅವರು ಮಾಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ   ಅಜೀಜ್ ಜಾಗಿರ್ದಾರ್ ರಾಜ್ಯ ಮಾಧ್ಯಮ ಕಾರ್ಯದರ್ಶಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ, ಆದಿಲ್ ಪಟೇಲ್ ಜಿಲ್ಲಾಧ್ಯಕ್ಷರು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ, ಅಲಿಮುದ್ದಿನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಉಪಸ್ಥಿತರಿದ್ದರು

Please follow and like us:
error