ಭಾರತ್ ಬಂದ್ ಯಶಸ್ವಿಗೊಳಿಸಲು ಕೊತ್ನಾಲ್ ಶರಣಪ್ಪ ಕರೆ

ಕೊಪ್ಪಳ : ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದ ಮೋದಿ ಸರ್ಕಾರ ತಕ್ಷಣ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಕರೆ ನೀಡಿರುವ ಭಾರತ ಬಂದ್ಗೆ ರೈತರು , ವ್ಯಾಪರಸ್ಥರು, ಸಾರ್ವಜನಿಕರು ಭಾಗವಹಿಸಿ ಬಂದ್ ಯಶಸ್ವಿಗೊಳಿಸಬೇಕೆಂದು ಭಾರತೀಯ ಕೃಷಿ ಕಾರ್ಮಿಕ ಮತ್ತು ರೈತ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೊತ್ವಾಲ್ ಶರಣಪ್ಪ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿರುವ ಅವರು, ಪ್ರಧಾನಮಂತ್ರಿಗಳಾದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಭಾರೀ ರೈತರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಒತ್ತು ನೀಡುವ ಮೂಲಕ ದೇಶವನ್ನೆ ದಿವಾಳಿ ಮಾಡಲು ಹೊರಟಿದ್ದಾರೆ. ನೂತನ ಕಾಯ್ದೆಗಳಿಂದ ದೇಶದ ಸಂಪೂರ್ಣ ರೈತ ಸಮೂಹ ಬೀದಿಗೆ ಬಂದಿದೆ ಎಂದರು. ಇನ್ನು ಭಾರತ್ ಬಂದ್ ಭಾಗವಾಗಿವ ಮಂಗಳವಾರದ ಮುಂಜಾನೆ ೫ ಗಂಟೆಯಿಂದ ಕೇಂದ್ರ ಸರ್ಕಾರ ವಿರುದ್ದ ವಿಭಿನ್ನವಾಗಿ ಪ್ರತಿಭಟಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ರೈತರು ಭಾಗವಹಿಸುದರ ಜೊತೆಗೆ ಬಂದ್ ಯಶಸ್ವಿಯಾಗಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ

Please follow and like us:
error