ಭಾರತದ ನಾಯಕಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 2 ದಶಕ ಕಳೆದ ಮೊದಲ ಮಹಿಳಾ ಆಟಗಾರ್ತಿ

Dehli :  ಭಾರತದ ನಾಯಕಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬುಧವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಭಾರತ ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದಲ್ಲಿ  ಎಂಟು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಜೂನ್ 26, 1999 ರಂದು ಐರ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಮಿಥಾಲಿ, 50 ಓವರ್ ಸ್ವರೂಪದಲ್ಲಿ 20 ವರ್ಷ ಮತ್ತು 105 ದಿನಗಳನ್ನು ಪೂರೈಸಿದರು.

ಬಲಗೈ ಬ್ಯಾಟ್ಸ್‌ವುಮನ್‌ ಇಲ್ಲಿಯವರೆಗೆ 204 ಏಕದಿನ ಪಂದ್ಯಗಳನ್ನು ಆಡಿದ್ದು, ಮಹಿಳೆಯರಲ್ಲಿ ಅತೀ ಹೆಚ್ಚು ಪಂದ್ಯವಾಡಿದ ಖ್ಯಾತಿ ಮಿಥಾಲಿಯವರದು. ನಂತರದ ಸ್ಥಾನದಲ್ಲಿ ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ (191), ಜುಲಾನ್ ಗೋಸ್ವಾಮಿ (178), ಆಸ್ಟ್ರೇಲಿಯಾದ ಅಲೆಕ್ಸ್ ಬ್ಲ್ಯಾಕ್‌ವೆಲ್ (144) ಇದ್ದಾರೆ. 36 ವರ್ಷದ ಮಿಥಾಲಿ ಭಾರತಕ್ಕಾಗಿ 10 ಟೆಸ್ಟ್ ಮತ್ತು 89 ಟಿ 20  ಪಂದ್ಯಗಳನ್ನು ಸಹ ಆಡಿದ್ದಾರೆ. ಮಿಥಾಲಿ ಕಳೆದ ತಿಂಗಳು ಟಿ 20 ಕ್ರಿಕೆಟ್‌ನಿಂದ ನಿವೃತ್ತರಾದರು.

Please follow and like us:
error