ಭಾರತದ ಗಡಿಯನ್ನು ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್

ಪಂಜಾಬ್ ನ ಫಿರೋಜ್‌ಪುರ ಬಳಿ ಕಾಣಿಸಿಕೊಂಡ ಪಾಕಿಸ್ತಾನದ ಡ್ರೋನ್

ಪಂಜಾಬ್  : ಫಿರೋಜ್‌ಪುರ ಬಳಿ ಪಾಕಿಸ್ತಾನ ಡ್ರೋನ್ ಪತ್ತೆಯಾದ ನಂತರ ಬಿಎಸ್‌ಎಫ್ ಎಚ್ಚರಿಕೆ ವಹಿಸಿದೆ ಪಾಕಿಸ್ತಾನದ ಡ್ರೋನ್ ಪಂಜಾಬ್‌ನ ಫಿರೋಜ್‌ಪುರದ ಹುಸೇನಿವಾಲಾ ಗಡಿಯಲ್ಲಿರುವ ಚೆಕ್‌ಪೋಸ್ಟ್‌ನ ಎಚ್‌ಕೆ ಟವರ್ ಬಳಿ ಹಾರುತ್ತಿರುವುದು ಕಂಡುಬಂದಿದೆ. ಐದು ಬಾರಿ ಹಾರಾಟ ನಡೆಸಿರುವುದಾಗಿ  ಮತ್ತು ಒಮ್ಮೆ ಈ ಡ್ರೋನ್ ಭಾರತದ ಗಡಿಯನ್ನು ಪ್ರವೇಶಿಸಿದೆ ಎಂದು ತಿಳಿದು ಬಂದಿದೆ.

ಈ ಡ್ರೋನ್ ಪಾಕಿಸ್ತಾನದ ಗಡಿಯಿಂದ ರಾತ್ರಿ 10 ರಿಂದ ರಾತ್ರಿ 10.40 ರವರೆಗೆ ಹಾರಾಡುತ್ತಿರುವುದು ಮತ್ತು ನಂತರ ಮತ್ತೆ  12.25 ಕ್ಕೆ ಭಾರತದ ಗಡಿ ದಾಟಿದಾಗ ಬಿಎಸ್ಎಫ್ ಜವಾನರು ಹಿರಿಯ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರು, ಇತರ ಗುಪ್ತಚರ ಸಂಸ್ಥೆಗಳೊಂದಿಗೆ ಮಂಗಳವಾರ ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಡ್ರೋನ್ ಮೂಲಕ ಡ್ರಗ್ಸ್ ಅಥವಾ ಮದ್ದುಗುಂಡುಗಳನ್ನು ಕಳುಹಿಸಿದ್ದಾರೆಯೇ ಎನ್ನುವುದು ಸ್ಪಷ್ಟಗೊಂಡಿಲ್ಲ.
ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳನ್ನು ಬೀಳಿಸಲು ಬಳಸಿದ ಎರಡು ಡ್ರೋನ್‌ಗಳನ್ನು ಪಂಜಾಬ್ ಸರ್ಕಾರ ವಶಪಡಿಸಿಕೊಂಡ ಒಂದು ವಾರದ ನಂತರ ಮತ್ತೆ ಡ್ರೋನ್   ಕಂಡುಬಂದಿದೆ.

Please follow and like us:
error