ಭರದಿಂದ ಸಾಗಿದ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ರಮ

ಕೊಪ್ಪಳ: ಹಿರೇಹಳ್ಳದ ಪುನಶ್ಚೇತನ ಕಾರ್ಯವು ದಿನದಿಂದ ದಿನಕ್ಕೆ ಭರದಿಂದ ಸಾಗಿ ಅತ್ಯಂತ

ತ್ವರಿತಗತಿಯಾಗಿ ಕೆಲಸಗಳು ಜರುಗುತ್ತಲಿವೆ. ಇಂದು ದದೇಗಲ್ ಬ್ರಿಡ್ಜ, ಮಾದಿನೂರ, ಓಜಿನಹಳ್ಳಿ, ಯತ್ನಟ್ಟಿ ಬ್ರಿಡ್ಜ, ಹಿರೇಸಿಂದೋಗಿ ಸಮೀಪ ಇರುವ ಹಿರೇಹಳ್ಳದ ಸ್ಥಳಗಳಲ್ಲಿ ಇರುವಂತಹ ಹಸಿರು ಪಾಚಿ, ಕೆಸರು, ಮುಳ್ಳುಕಂಟಿಗಳು, ಜಾಲಿಮರಗಳು ಹಾಗೂ ಕಸಕಡ್ಡಿಗಳನ್ನು ತೆಗೆದು ಹಾಕಲಾಯಿತು. ಈ ಕಾರ್ಯದಲ್ಲಿ 37 ಇಟ್ಯಾಚಿ, 20 ಡೋಜರ್ ಹಾಗೂ 2 ಟ್ರ್ಯಾಕ್ಟರ್ ,1 ಜೆ.ಸಿ.ಬಿ ಸೇರಿ ಒಟ್ಟು 60 ಯಂತ್ರಗಳನ್ನು ಸ್ವಚ್ಛತಾಕಾರ್ಯದಲ್ಲಿ ಬಳಸಿಕೊಳ್ಳಲಾಯ್ತು.. ಈ ಕಾರ್ಯದಲ್ಲಿ ಪೂಜ್ಯ ಶ್ರೀಗಳೊಂದಿಗೆ ರೈತರು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು.
ದೇಣಿಗೆ: ಹಿರೇಹಳ್ಳದ ಪುನಶ್ಚೇತನ ಕಾರ್ಯವು ಈಗಾಗಲೇ ಸಾಗರೋಪವಾಗಿ ಸಾಗಿದೆ. ಕಾಮಗಾರಿಗೆ ಅನೇಕ ಹಲವು ಸಂಘ, ಸಂಸ್ಥೆಯವರು, ವಿವಿಧ ಮಠಾದೀಶರು, ಶಿಕ್ಷಕರು, ಅಧ್ಯಾಪಕರು, ಹಾಗೂ ಗಣ್ಯರು ಆರ್ಥಿಕ ಸಹಾಯವನ್ನು ದೇಣಿಗೆ ರೂಪದಲ್ಲಿ ಕೊಟ್ಟಿರುತ್ತಾರೆ. ಇಂದು ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಡಶಾಲೆಯ ಸಿಬ್ಭಂಧಿ ವರ್ಗದ ವತಿಯಿಂದ 53800 ರೂಪಾಯಿಗಳು, ಶ್ರೀಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ 6000 ರೂಪಾಯಿಗಳು, ಶಿಕ್ಷಕರಾದ ಕೊಡದಾಳ ಗ್ರಾಮದ ಚಿದಾನಂದ ಮೇಟಿ 5000 ರೂಪಾಯಿಗಳನ್ನು ಪೂಜ್ಯಶ್ರೀಗಳಿಗೆ ಅರ್ಪಿಸಿದ್ದಾರೆ. ಮಾದಿನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 3-4 ದಿನಗಳಿಂದ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ನಿಧಿ ಸಂಗ್ರಹಿಸಿ ದಿನಾಂಕ 16.03.19 ರಂದು ಪೂಜ್ಯ ಶ್ರೀಗಳಿಗೆ ಅರ್ಪಿಸಿದರು. ದಾನಿಗಳಿಗೆ ಪೂಜ್ಯಶ್ರೀಗಳು ಆಶಿರ್ವಧಿಸಿದ್ದಾರೆ.
ಸೇವಾ ಕೈಂಕರ್ಯ: ಕೊಪ್ಪಳ: ಹಿರೇಹಳ್ಳದ ಪುನಶ್ಚೇತನ ಕಾರ್ಯವು ನಡೆಯುತ್ತಿರುವ ಎಲ್ಲಾ ಸ್ಥಳಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಕೆಲಸಗಾರರಿಗೆ ಕೊಪ್ಪಳದ ಆದಿಬಣಜಿಗ ಸಮಾಜದ ಯುವ ವೇದಿಕೆ ವತಿಯಿಂದ ಕುಡಿಯಲು ತಂಪಾದ ನೀರು ಹಾಗೂ ಮಜ್ಜಿಗೆಯನ್ನು ವಿತರಿಸಿದರು. ಅಮರೇಶ ಮುರಳಿ ಮತ್ತು ಬಸವರಾಜ ಮುತ್ತಾಳ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ವಾಹನವನ್ನು ತೆಗೆದುಕೊಂಡು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಕೆಲಸಗಾರರಿಗೆ ತಂಪಾದ ನೀರು ಮತ್ತು ಮಜ್ಜಿಗೆಯನ್ನು ವಿತರಿಸಿದರು. ಇದೇ ರೀತಿ ಕೊಪ್ಪಳದ ವಿದ್ಯಾನಗರದ ಗವಿಮಠದ ಭಕ್ತಾದಿಗಳಿಂದ ಯತ್ನಟ್ಟಿ ಮತ್ತು ಭಾಗ್ಯನಗರ ಮಧ್ಯದಲ್ಲಿ ನಡೆಯುತ್ತಿರುವ ಹಿರೇಹಳ್ಳ ಪುನಶ್ಚೇತನಾ ಕೆಲಸದಲ್ಲಿ ತೊಡಗಿದ ಕೆಲಸಗಾರರಿಗೆ ಬೆಳಗಿನ ಉಪಹಾರ ಹಾಗೂ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಈ ಮೂಲಕ ಉಭಯರು ತಮ್ಮ ಅಳಿಲು ಸೇವೆ ಸಲ್ಲಿಸದರು.
ಶ್ರಮದಾನ: ಕಾಟ್ರಳ್ಳಿ ಹತ್ತಿರ ಜರುಗುತ್ತಿರುವ ಹಿರೇಹಳ್ಳ ಪುನಶ್ಚೇತನಾ ಕಾರ್ಯದಲ್ಲಿ ಕೊಪ್ಪಳ ತಾಲೂಕಿನ 40 ಕ್ಕಿಂತ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಶ್ರಮದಾನ ಮಾಡಿದರು. ತರಗತಿಯಲ್ಲಿ ಪಾಠಕ್ಕೆ ಅಷ್ಟೇ ಸೀಮಿತವಾಗಿದ್ದ ಶಿಕ್ಷಕರು ಇಂದು ಸಮಾಜಮುಖೀ ಹಿರೇಹಳ್ಳದ ಪುನಶ್ಚೇತನಾ ಕಾರ್ಯದಲ್ಲಿ ಶ್ರಮದಾನ ಮಾಡುವ ಮೂಲಕ ತಮ್ಮ ನಮ್ಮ ಅಳಿಲು ಸೇವೆ ಸಲ್ಲಿಸಿದರು. ಶಿಕ್ಷಕ ಬಳಗಕ್ಕೆ ಪೂಜ್ಯಶ್ರೀಗಳು ಆಶಿರ್ವದಿಸಿದ್ದಾರೆ.
ಮುಂಡರಗಿ ಶ್ರೀಗಳ ಬೇಟಿ : ಹಿರೇ ಸಿಂಧೋಗಿಹಳ್ಳದ ಬ್ರಿಡ್ಜ ಸಮಿಪ ಜರುಗುತ್ತಿರುವ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ರಮಕ್ಕೆ ಇಂದು ಮುಂಡರಗಿಯ ಶ್ರೀ ಮ ನಿ ಪ್ರ ಜ ಡಾ || ಅನ್ನದಾನಿಶ್ವರ ಮಹಾಸ್ವಾಮಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೊಪ್ಪಳದ ಗವಿಮಠದ ಪೂಜ್ಯರು ಉಪಸ್ಥಿತರಿದ್ದರು.

Please follow and like us:
error