ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದ ಭಯೋತ್ಪಾದಕಿ ಪ್ರಜ್ಞಾ: ರಾಹುಲ್

ಹೊಸದಿಲ್ಲಿ, ನ.28: ಸಂಸತ್ ನಲ್ಲಿ ಗಾಂಧಿ ಹಂತಕ ಗೋಡ್ಸೆ ಬಗ್ಗೆ ಪ್ರಜ್ಞಾ ಸಿಂಗ್ ನೀಡಿರುವ ಹೇಳಿಕೆಯಿಂದ ಬಿಜೆಪಿ ಮತ್ತು ಆರೆಸ್ಸೆಸ್ ನ ಹೃದಯ ಏನೆನ್ನುವುದನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

“ಭಯೋತ್ಪಾದಕಿ ಪ್ರಜ್ಞಾ ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾಳೆ. ಭಾರತದ ಸಂಸತ್ ನ ಇತಿಹಾಸದಲ್ಲಿ ಬೇಸರದ ದಿನ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

“ಆಕೆ ಹೇಳಿದ್ದು ಆರೆಸ್ಸೆಸ್ ಮತ್ತು ಬಿಜೆಪಿಯ ನೈಜ ಮುಖ. ಅದನ್ನು ಅಡಗಿಸಿಡಲು ಸಾಧ್ಯವಿಲ್ಲ” ಎಂದವರು ಹೇಳಿದ್ದಾರೆ.

Please follow and like us:
error