ಬೇಸಿಗೆಯ ಬಿಸಿ ತಾಪ ತಣಿಸಲು ಪಕ್ಷಿಗಳಿಗಾಗಿ ಮಣ್ಣಿನ ತಟ್ಟೆಗಳ ವಿತರಣೆ

Kannadanet News ಅಗ್ನಿಶಾಮಕ ಸೇವಾ ಸಪ್ತಾಹದ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಿಪ್ರಿಯ, ಹವ್ಯಾಸಿ ಛಾಯಾಗ್ರಾಹಕರಾದ ಅಂದಾನಗೌಡ ದಾನಪ್ಪಗೌಡ್ರ ಇವರು ಬೇಸಿಗೆಯ ಬಿಸಿ ತಾಪ ತಣಿಸಲು ಪಕ್ಷಿಗಳಿಗಾಗಿ ಮಣ್ಣಿನ ತಟ್ಟೆಗಳನ್ನು ವಿತರಿಸಿದರು.

ನಗರದ ಜಿಲ್ಲಾ ಅಗ್ನಿಶಾಮಕ ಠಾಣೆಯಲ್ಲಿ ಸಾಕಷ್ಟು ಗಿಡಮರಗಳನ್ನು ಸಿಬ್ಬಂದಿ ಪೋಷಿಸುತ್ತಿದ್ದಾರೆ. ಆ ಪರಿಸರದಲ್ಲಿ ಹರಿಷಿಣ ಬುರುಡೆ (Eurasian golden oriole), ಕಂಚಿಕುಟುಕ(ಕಾಪರ್ ಸ್ಮಿತ್ ಬಾರ್ಬೆಟ್), ಬಿಳಿ ಹುಬ್ಬಿನ ಪಿಕರಾಳ, (white browed vented bulbul), ಸೂರಕ್ಕಿ, small minivet ಕಲ್ಲಿನಂಥ ಕ್ರೌಂಚ ಪಕ್ಷಿ ( Eurasian stone curlew) ಹಾಗೂ ಸಾಕಷ್ಟು ವಿಶೇಷ ಪ್ರಭೇದಗಳ ಪಕ್ಷಿಗಳನ್ನು ಅಗ್ನಿಶಾಮಕ ಠಾಣೆಯ ಆವರಣದಲ್ಲಿನ ಗಿಡಮರಗಳಲ್ಲಿ ಕಾಣಬಹುದು.

ಪಕ್ಷಿವೀಕ್ಷಣೆ ಹಾಗೂ ಪಕ್ಷಿ ಛಾಯಾಚಿತ್ರ ಮಾಡಲು ನಗರದ ಸಮೀಪದಲ್ಲಿ ಒಳ್ಳೆಯ ಅವಕಾಶ ಇದೆ ಎಂದು ಹವ್ಯಾಸಿ ಛಾಯಾಗ್ರಾಹಕರಾದ ಅಮರದೀಪ್, ಪಟಾಕಿ ಬಸು ಅಭಿಪ್ರಾಯಪಡುತ್ತಾರೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ನಶಾಮಕ ಠಾಣೆಯ ಅಧಿಕಾರಿ ಕೆ.ಎಮ್.ಸಿದ್ದೇಶ್ವರ, ಠಾಣಾಧಿಕಾರಿ ಜಿ.ಕೃಷ್ಣೋಜಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Please follow and like us:
error