ಬೆಳಗಾವಿ ಮಹಿಳೆಯ ಟ್ರಾವೆಲ್ ಹಿಸ್ಟರಿಗೆ ಅಧಿಕಾರಿಗಳು ಕಂಗಾಲು

ಬೆಳಗಾವಿ:  ಕೊರೋನಾ ವೈರಸ್ ಹೊಸ ರೂಪಾಂತರ ಎಲ್ಲರಿಗೂ ತಲೆಬಿಸಿ ಮಾಡಿದೆ. ಭಾರತಕ್ಕೆ ಇನ್ನು ಇದರ ಚಿಂತೆ ಶುರುವಾಗಿಲ್ಲ ಎನ್ನುವಷ್ಟರಲ್ಲೇ ಕುಂದಾನಗರಿಯ ಬೆಳಗಾವಿ ಜಿಲ್ಲೆಗೆ ಇದರ ಆತಂಕ ಶುರುವಾಗಿದೆ.   ಈಗಾಗಲೇ ಲಂಡನ್ ನಿಂದ ಬರುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಖಾಡೆ ಬಜಾರ್ ನಲ್ಲಿ ಇಂಗ್ಲೆಂಡ್ ನಿಂದ ಮಹಿಳೆಯೊಬ್ಬರು ಬಂದಿಳಿದಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲೆಗೆ ರೂಪಾಂತರ ವೈರಸ್ ನ ಭೀತಿ ಎದುರಾಗಿದೆ.  ಈ ಮಹಿಳೆ ಲಂಡನ್‌ನಿಂದ ಬೆಳಗಾವಿಗೆ ಬಂದಿದ್ದ ಮಹಿಳೆಯ ಟ್ರಾವೆಲ್ ಹಿಸ್ಟರಿ ಭಯಂಕರವಾಗಿದೆ. ಡಿಸೆಂಬರ್ 14ರಂದು ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ. ಬೆಂಗಳೂರಿನಿಂದ ಬಾಗಲಕೋಟೆ ಜಿಲ್ಲೆ‌ ಜಮಖಂಡಿಗೆ ತೆರಳಿ, ಅಲ್ಲಿಂದ ಬೆಳಗಾವಿ ಮಹಿಳೆಯ ಡಿಸೆಂಬರ್ 15ರಿಂದ ಡಿಸೆಂಬರ್ 21ರವರೆಗೂ ಜಮಖಂಡಿಯಲ್ಲಿದ್ದ ಮಹಿಳೆ. ನಿನ್ನೆ ಮಧ್ಯಾಹ್ನ ಜಮಖಂಡಿಯಿಂದ ಬೆಳಗಾವಿಗೆ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಇನ್ನು ಬೆಳಗಾವಿಗೆ ಆಗಮಿಸಿದಾಗ ಮಹಿಳೆಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಕರೆ ಮಾಡಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಮಹಿಳೆಯ ಕೋವಿಡ್ 19 ವರದಿ ಬರುವ ನಿರೀಕ್ಷೆಯಿದೆ. ಮುಂಜಾಗ್ರತಾ ಕ್ರಮವಾಗಿ ಮಹಿಳೆಯ ಕುಟುಂಬಸ್ಥರಿಗೆ ಹೋಮ್ ಐಸೋಲೇಷನ್ ಮಾಡಲಾಗಿದೆ ಎಂದು ಬೆಳಗಾವಿ ಆರೋಗ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.

 

Please follow and like us:
error