ಬೆಂಗಳೂರು: ಗುಡಿಸಲುಗಳ ನೆಲಸಮ ಕಾರ್ಯಾಚರಣೆ ‘ಅನಧಿಕೃತ’ ಎಂದು ಒಪ್ಪಿಕೊಂಡ ಬಿಬಿಎಂಪಿ

twitter.com/prajwalmanipal

ಬೆಂಗಳೂರು:  ನಗರದ ಹೊರವಲಯದ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿನ ತೆರವು ಕಾರ್ಯಾಚರಣೆಯ ವೇಳೆ 100ಕ್ಕೂ ಅಧಿಕ ಗುಡಿಸಲುಗಳನ್ನು ‘ಅನಧಿಕೃತ’ವಾಗಿ  ನೆಲಸಮಗೊಳಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಒಪ್ಪಿಕೊಂಡಿದೆ ಎಂದು thenewsminute.com ವರದಿ ಮಾಡಿದೆ.

ಈ ಗುಡಿಸಲುಗಳ ನೆಲಸಮ ಕಾರ್ಯಾಚರಣೆಗೆ  ಮಹದೇವಪುರ ವಲಯದ ಸಹಾಯಕ ಕಾರ್ಯಕಾರಿ ಅಭಿಯಂತರ ನಾರಾಯಣ ಸ್ವಾಮಿ ಆದೇಶಿಸಿದ್ದರೆಂದೂ ಹೇಳಲಾಗಿದೆ. ಖಾಸಗಿ ಜಮೀನಿನಲ್ಲಿ ಇಂತಹ ಕಾರ್ಯಾಚರಣೆ ನಡೆಸುವ ಅಧಿಕಾರ ಅವರಿಗಿಲ್ಲವಾದುದರಿಂದ ಅವರನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ  ಇಲಾಖೆಗೆ ವರ್ಗಾಯಿಸಲಾಗಿದೆ. ಸ್ಥಳೀಯ ಹಲವು ನಿವಾಸಿಗಳ ದೂರಿನ ಹಿನ್ನಲೆಯಲ್ಲಿ ಅವರು ಈ ಆದೇಶ ನೀಡಿದ್ದರೆನ್ನಲಾಗಿದೆ.

ಈ ನಿರ್ದಿಷ್ಟ ಜಮೀನಿನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಿಸಗರು ವಾಸವಾಗಿದ್ದರು ಹಾಗೂ ಜಮೀನಿನ ಮಾಲಕನಿಗೆ ತೆರವು ನೋಟಿಸ್ ನೀಡಲಾಗಿತ್ತು ಎಂದು ಶನಿವಾರ ಹಾಗೂ ರವಿವಾರ ನಡೆದ ಕಾರ್ಯಾಚರಣೆ ಸಂದರ್ಭ ಪೊಲೀಸರು ಹೇಳಿದ್ದರು. ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಕೂಡ ಇದನ್ನೇ ಹೇಳಿ ಟ್ವೀಟ್ ಮಾಡಿದ್ದರು.

ನೆಲಸಮ ಕಾರ್ಯಾಚರಣೆಯಿಂದ ನೂರಾರು ಮಂದಿ ನಿರ್ವಸಿತರಾಗಿದ್ದಾರೆ.

Please follow and like us:
error