ಬೆಂಗಳೂರು ಖಾಸಗಿ ಆಸ್ಪತ್ರೆಗಳಲ್ಲಿ ಶೇ.78% ಹಾಸಿಗೆಗಳು ಖಾಲಿಯಿವೆ- ಸಚಿವ ಕೆ.ಸುಧಾಕರ್

ಬೆಂಗಳೂರು ನಗರದಾದ್ಯಂತ ಇರುವ ಒಟ್ಟು 72 ಖಾಸಗಿ ಆಸ್ಪತ್ರೆಗಳಲ್ಲಿ 3331 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಶನಿವಾರ ಸಂಜೆಯ ವೇಳೆಗೆ ಇವುಗಳಲ್ಲಿ 733 ಹಾಸಿಗೆಗಳು ಭರ್ತಿಯಾಗಿದ್ದು 2598 ಹಾಸಿಗೆಗಳು ಅಂದರೆ ಸುಮಾರು ಶೇ.78% ಹಾಸಿಗೆಗಳು ಖಾಲಿಯಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ಹಾಕಿದ್ದಾರೆ. ಬೆಂಗಳೂರು ನಗರದಲ್ಲಿ ಹಾಸಿಗೆಗಳ ಕೊರತೆಯಿದೆ ಎನ್ನುವ ಪುಕಾರುಗಳ ಹಿನ್ನೆಲೆಯಲ್ಲಿ ಈ ಮಾಹಿತಿ ಮಹತ್ವ ಪಡೆದುಕೊಂಡಿದೆ.

 

Please follow and like us:
error