Koppal : ಬೆಂಗಳೂರಿನಲ್ಲಿ ಫೆಬ್ರುವರಿ 10ರಂದು ಅಖಿಲ ಭಾರತ ನೋಟರಿಗಳ ಸಮಾವೇಶ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುಪ್ರಿಂ ಕೋರ್ಟನ ನ್ಯಾಯಾದೀಶರಾದ ಮೋಹನ್ ಎಂ. ಶಾಂತನಗೌಡರ ನೆರವೇರಿಸಲಿದ್ಧಾರೆ. ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿ ಹೆಚ್.ಡಿ,ಕುಮಾರಸ್ವಾಮಿ ಬಿಡುಗಡೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ ಆ್ಯಕ್ಟಿಂಗ್ ಚೀಪ್ ಜಸ್ಟಿಸ್ ಎಲ್. ನಾರಾಯಣಸ್ವಾಮಿ ಹಾಗೂ ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಾದ ಡಾ.ಜಿ.ಪರಮೇಶ್ವರ ಮತ್ತು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಆಗಮಿಸಲಿದ್ಧಾರೆ ಎಂದು ರಾಜ್ಯ ನೋಟರೀಸ್ ಅಸೋಶಿಯನ್ ಅಧ್ಯಕ್ಷ ಎಸ್.ಅಸೀಫ್ಅಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷರು ನೋಟರಿಗಳು ವಿವಿಧ ಸಮಸ್ಯೆಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಆರ್.ಎಸ್.ಕಟ್ಟಿ, ಸಿದ್ರಾಮಸ್ವಾಮಿ ಹಿರೇಮಠ, ನೀಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us: