ಬಿಸಿಯೂಟದಲ್ಲಿ ಹಲ್ಲಿ : ಶಾಲಾ ಮಕ್ಕಳು ಅಸ್ವಸ್ಥ

Koppal ಬಿಸಿಯೂಟ ಸೇವಿಸಿ ಸರ್ಕಾರಿ ಶಾಲೆಯ ನೂರಾರು ವಿದ್ಯಾರ್ಥಿಗಳು ಅಸ್ವಸ್ಥತಗೊಂಡ ಘಟನೆ ಕೊಪ್ಪಳದಲ್ಲಿ ಜಿಲ್ಲೆಯ ಬೇವೂರಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ನೂರಾರು ವಿದ್ಯಾರ್ಥಿಗಳು ಬಿಸಿಯೂಟ ಮಾಡಿದ್ದಾರೆ. ಊಟ ಸೇವಿಸಿದ ನಂತ್ರ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ತಲೆಸುತ್ತು ಬಂದು ಅಸ್ವಸ್ಥತಗೊಂಡಿದ್ದಾರೆ. ಒಬ್ಬರಾಗಿ ಅಸ್ವಸ್ಥತರಾಗುತ್ತಿದ್ದಂತೆ ಫುಡ್ ಫಾಯಿಜನ್ ಆಗಿರಬಹುದು ಅಂತ ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ಮಕ್ಕಳನ್ನ ದಾಖಲಿಸಿದ್ದಾರೆ. ಊಟದಲ್ಲಿ ಅಲ್ಲಿ ಬಿದ್ದಿದೆ ಎನ್ನಲಾಗುತ್ತಿದೆ ಇದ್ರಿಂದಾಗಿ ಮಕ್ಕಳು ತೀವ್ರ ಅಸ್ವಸ್ಥತರಾಗಿದ್ದಾರೆ. ಹಲವು ವಿದ್ಯಾರ್ಥಿಗಳನ್ನ ಕೊಪ್ಪಳ, ಯಲಬುರ್ಗಾ ಸೇರಿದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಅಡುಗೆಯನ್ನ ದೂರದಲ್ಲಿ ಚೆಲ್ಲಿದ್ದಾರೆ. ವಿದ್ಯಾರ್ಥಿಗಳ ಅಸ್ವಸ್ಥತೆ ಸುದ್ದಿ ತಿಳಿದು ಪೊಷಕರು ಶಾಲೆ ಮತ್ತು ಆಸ್ಪತ್ರೆ ಯತ್ತ ಧಾವಿಸಿದ್ದಾರೆ.ಕೊಪ್ಪಳ ಜಿಲ್ಲಾಸ್ಪತ್ರೆಗೆ ಮಕ್ಕಳು ದಾಖಲಾಗಿದ್ದು ಜಿಲ್ಲಾಧಿಕಾರಿಗಳು, ಗವಿಮಠಶ್ರೀಗಳು ಭೇಟಿ ನೀಡಿದರು.