ಬಿಜೆಪಿ  ಸರ್ಕಾರ ದೇಶದ ಜನರ ಸುಲಿಗೆ ಮಾಡುತ್ತಿದೆ- ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ದರ ಏರಿಕೆ ನಿಲುವು ಖಂಡಿಸಿ ಇಂದು ನನ್ನ ನಿವಾಸದಿಂದ ಪ್ರದೇಶ ಕಾಂಗ್ರೆಸ್ ಕಚೇರಿಗೆ ಸೈಕಲ್ ಮೂಲಕ ತೆರಳಿದೆ. ಕಚ್ಚಾತೈಲ ಬೆಲೆ ಕುಸಿದಿದ್ದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿರಂತರ ಏರಿಸುತ್ತಾ ನರೇಂದ್ರ ಮೋದಿಯವರ ನೇತೃತ್ವದ  ಬಿಜೆಪಿ  ಸರ್ಕಾರ ದೇಶದ ಜನರ ಸುಲಿಗೆ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದರ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ

ಯುಪಿಎ ಕಾಲದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 112 ಡಾಲರ್. ಪೆಟ್ರೋಲ್ ಬೆಲೆ ಲೀಟರ್‌ಗೆ ರೂ 71.84, ಡೀಸೆಲ್ ಬೆಲೆ ರೂ.55.49. ಈಗ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 42 ಡಾಲರ್‌. ಪೆಟ್ರೋಲ್ ಬೆಲೆ ರೂ.83 ಮತ್ತು ಡೀಸೆಲ್ ಬೆಲೆ ರೂ.76.95. ಇದೇನಾ ನಿಮ್ಮ ಅಚ್ಚೇ ದಿನ್ ಮೋದಿಜಿ? ಯುಪಿಎ ಸರ್ಕಾರದ ಕಾಲದಲ್ಲಿ ಪೆಟ್ರೋಲ್ ಮೇಲೆ ರೂ.9.20 ಮತ್ತು ಡೀಸೆಲ್ ಮೇಲೆ ರೂ.3.45 ಅಬಕಾರಿ ಸುಂಕ ಇತ್ತು. ಈಗ ಈ ಸುಂಕ ಕ್ರಮವಾಗಿ ರೂ.32.98 ಮತ್ತು ರೂ.31.98ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಕ್ರಮವಾಗಿ 258%, 820% ಸುಂಕ ಹೆಚ್ಚಾಗಿದೆ. ಇದು ಸುಂಕನಾ, ಸುಲಿಗೆನಾ @PMOIndia? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:
error