ಬಿಜೆಪಿ ಪರ ಪ್ರಚಾರ : ಸರಕಾರಿ ನೌಕರ ಅಮಾನತ್ತು

Koppal ಫೇಸ್ ಬುಕ್ ನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಸರಕಾರಿ ನೌಕರನನ್ನು ಅಮಾನತ್ತು ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಗಂಗಾವತಿ ಯ ವಾರ್ಡನ್ ಗುರುಬಸವರಾಜ್ ಅಮಾನತ್ತಾದವರು.

ಕಳೆದ ವಿಧಾನಸಭಾ ಚುನಾವಣೆಯಿಂದ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ತಮ್ಮ ಫೇಸ್ಬುಕ್ ಅಕೌಂಟ್ ಮೂಲಕ ಬಿ . ಜೆ . ಪಿ ಪಕ್ಷದ ಪರ ಪ್ರಚಾರ ಹಾಗೂ ಬಿಜೆಪಿ ಪಕ್ಷದ ನಾಯಕರ ಫೋಟೋಗಳನ್ನು ಆಪಲೋಡ್ ಮಾಡುತ್ತಾ ನಿರಂತರ ಪ್ರಚಾರ ಹಿನ್ನೆಲೆಯಲ್ಲಿ ಗುರುಬಸವರಾಜ್ ವಿರುದ್ದ ದೂರುಗಳು ದಾಖಲಾಗಿದ್ದವು. ಹೀಗಾಗಿ ಅಮಾನತ್ತಿಗೊಳಗಾಗಿದ್ದಾರೆ. ಕರ್ನಾಟಕ ನಾಗರಿಕ ಸೇವಾ ( ನಡತೆ ) ನಿಯಮಗಳ , ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಹಿನ್ನೆಲೆ ಅಮಾನತ್ತು.. ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ಅಮಾನತ್ತು ಆದೇಶ ಮಾಡಿದ್ದಾರೆ

Please follow and like us: