ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಶಿವರಾಜ್ ತಂಗಡಗಿ

Koppal ನಮ್ಮ ಮೂರು ಪ್ರಶ್ನೆಗಳಿಗೆ ಈ ದೇಶದ ಪ್ರಧಾನಿ ಉತ್ತರಿಸಲಿ, ಮೋದಿ ಅವರಾದ್ರೂ, ರಾಜ್ಯ ನಾಯಕರಾದ್ರೂ, ಸ್ಥಳೀಯ ನಾಯಕರಾದ್ರೂ ಉತ್ತರಿಸಲಿ. ೨೦೧೪ ರಲ್ಲಿ ಮೋದಿ ಅವರು ೧೫ ಲಕ್ಷ ಹಣ ಹಾಕ್ತೀನಿ ಅಂತ ಹೇಳಿದ್ರು ಅದನ್

ನ ಹಾಕಿದ್ದಾರಾ?, ಅಥವಾ ಸಂಗಣ್ಣ ಅವರ ಅಕೌಂಟಗಾದ್ರೂ ಹಾಕಿದ್ದಾ? ಸ್ಪಷ್ಟಪಡಿಸಲಿ. ಇನ್ನು
೨ ಕೋಟಿ ಯುವಕರಿಗೆ ಉದ್ಯೋಗ ಕೊಟ್ಟಿದ್ದರಾ? ಹೋಗ್ಲಿ ಬಿಡಿ ಮೋದಿ ಮೋದಿ ಅನ್ನೋ ಯುವಕರಿಗಾದ್ರೂ ಕೊಟ್ಟಿದ್ದರಾ? ಹೇಳಲಿ, ಕೃಷಿಕರ ಬೆಳೆಗೆ ದ್ವಿಗುಣ ಬೆಲೆ ನೀಡುವುದಾಗಿ ಹೇಳಿದ್ದರು ೫ ವರ್ಷದಲ್ಲಿ ಅದನ್ನು ಮಾಡಿದ್ದರಾ? ಕೊಪ್ಪಳದಲ್ಲಿ ಕೈಗಾರಿಕ ವಲಯ ಸೃಷ್ಟಿ ಮಾಡಿದ್ದರಾ? ಇದನ್ನ ಕರಡಿ ಸಂಗಣ್ಣ ಅವರಾದ್ರೂ ಸ್ಪಷ್ಟಪಡಿಸಲಿ ಅಥವಾ ರಾಜ್ಯದ ನಾಯಕಾದ್ರೂ ಸ್ಪಷ್ಟಪಡಿಸಲಿ ಅಂತ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವರಾಜ ತಂಗಡ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಅವರು ಮಾತನಾಡಿದರು.
ಇನ್ನು ಮೈತ್ರಿ ಸರ್ಕಾರ 20% ಕಮಿಷನ್ ಸರ್ಕಾರ ಅಂತ ಮೋದಿ ಟೀಕೆ ಮಾಡಿದ್ದಾರೆ ಅನ್ನೋ ಪ್ರಶ್ನೆ ಪ್ರತಿಕ್ರಿಯೆ ನೀಡಿದ ಶಿವರಾಜ ತಂಗಡಗಿ, ಮೋದಿ ಅವರು ಬಹುಶಃ ಕನ್ಫ್ಯೂಸ್ ಆಗಿರಬೇಕು. ಗಂಗಾವತಿ ಶಾಸಕರು ೧೦%ಹಾಗೂ ಕನಕಗರಿ ಶಾಸಕರು ೧೦% ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಅನ್ನೋ ಬದಲು ಕನ್ಫ್ಯೂಸ್ ಆಗಿ ರಾಜ್ಯ ಸರ್ಕಾರದ ಬಗ್ಗೆ ಹೇಳಿರಬೇಕು ಅಂತ ವ್ಯಂಗ್ಯವಾಡಿದರು. ಇನ್ನು ಕುಮಾರಸ್ವಾಮಿ ಸೈನಿಕರ ಬಗ್ಗೆ ಹಗುರವಾಗಿ ಮಾತಾಡುತ್ತಾರೆ ಅಂತ ಬಿಜೆಪಿ ಅವರು ಆರೋಪ ಮಾಡುತ್ತಾರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ, ಸೈನಿಕರನ್ನು ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು ಪ್ರಧಾನಿ ಇ ರಾಜಕೀಯ ಮಾಡುತ್ತಾರೆ. ೪೨ ಅಮಾಯಕ ಸೈನಿಕರು ಪ್ರಾಣ ನೀಡಿದ್ದಾರೆ. ಇದು ಯಾರ ವೈಫಲ್ಯ. ಮುಂಚಿತವಾಗಿ ಮೋದಿ ಅವರಿಗೆ ಮಾಹಿತಿ ಇದ್ದರೂ ಅದನ್ನು ಯಾಕೇ ತಡಿಲಿಲ್ಲ. ಅದರ ಬಗ್ಗೆ ಯಾಕೆ? ಮಾತನಾಡುವುದಿಲ್ಲ. ಇವರದ್ದೆ ಎಲ್ಲೋ ಪ್ಲಾನ್ ಇರಬೇಕು. ಸರ್ಜಿಕಲ್ ಸ್ಟ್ರೈಕ್, ವೈಮಾನಿಕ ಸ್ಟ್ರೈಕ್ ಇವರೇ ಮಾಡಿದ್ರಾ? ಇವರೇನು ವಿಜ್ಞಾನಿನಾ?, ಇಂದಿರಾ ಗಾಂಧಿ ಅವರು ೧೯೭೧ ರಲ್ಲಿ ಪಾಕಿಸ್ತಾನ ಡಾಕಾವರೆಗೆ ಸುಮಾರ ೮೦ ಸಾವಿರಾ ಸೈನಿಕರನ್ನು ಯುದ್ಧಕ್ಕಾಗಿ ನಿಲ್ಲಿಸಿ ಸೋಲಿಸಿದ್ದರು. ಅಂದಿನ ಪಾಕಿಸ್ತಾನ ಕಾಮಾಂಡೋ ತನ್ನ‌ ಕ್ಯಾಪ್ ತೆಗೆದು ನೆಲಕ್ಕಿಟ್ಟು ಸೋಲನ್ನು ಒಪ್ಪಿಕೊಂಡಿದ್ದಾ.‌ ಅದನ್ನು ಯಾವತ್ತಾದ್ರೂ ರಾಜಕೀಯಕ್ಕೆ ಬಳಸಲಾಗಿದೇನಾ? ಮೋದಿ ಅವರಿಗೆ ಆಪ್ತರಾಗಿದ್ದ, ಪವನ‌ ಕಲ್ಯಾಣ ಅವರು, ಸೈನಿಕರ ವಿಷಯದಲ್ಲಿ ಮೋದಿ ವಿಫಲರಾಗಿದ್ದಾರೆ ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಅದನ್ನೇ ಹೇಳಿದ್ದಾರೆ. ಇನ್ನೊಂದು ವಿಷಯ ಯಾರು ಕೂಡ ಸೈನಿಕರ ಹೆಸರ ಮೇಲೆ ರಾಜಕೀಯ ಮಾಡಬಾರದು. ಅವರು ನಮ್ಮ ರಕ್ಷಕರು. ಅವರಿಗೆ ಗೌರವ ಕೊಡಬೇಕು. ಅದು ಯಾರೇ ಆಗಿರಲಿ ಸೈನಿಕರನ್ನು ರಾಜಕೀಯಕ್ಕೆ ಬಳಿಸಿಕೊಳ್ಳಬಾರದು ಅಂತ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ರಾಹುಲ್ ಗಾಂಧಿ ಕೊಲೆಗೆ ಯತ್ನ ಸುಳ್ಳು ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ, ಈ ದೇಶದಕ್ಕಾಗಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ತ್ಯಾಗಮಾಡಿದ್ದಾರೆ.ಅವರನ್ನು ಕೊಲೆ ಮಾಡಲಾಯಿತು. ಸದ್ಯ ರಾಹುಲ್ ಗಾಂಧಿ ಅವರ ಮೇಲೆನೂ ಕೊಲೆ ಯತ್ನ ನಡೆತುತ್ತಿವೆ. ಅದನ್ನು ಕೇಂದ್ರ ಸರ್ಕಾರ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಮೊಬೈಲ್ ಲೇಸರ್ ಲೈಟು, ಕೊಲೆಯತ್ನ ಅಲ್ಲ, ಪತ್ರ ಸುಳ್ಳು ಅಂತ ಹೇಳೋದು ಎಷ್ಟು ಸರಿ? ರಾಹುಲ್ ಅವರಿಗೆ ಸರಿಯಾದ ಸೆಕ್ಯೂರಿಟಿ ಬೇಕಾಗಿದೆ. ಅವರು ಒಬ್ಬ ಈ ದೇಶದ ಧೀಮಂತ ಯುವ ನಾಯಕರು ಅವರ ರಕ್ಷಣೆ ಕೂಡ ಈ ದೇಶಕ್ಕೆ ಅಗತ್ಯ ಇದೆ ಅಂತ ಹೇಳಿದರು. ಇನ್ನು ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ನಿಮಗೆ ತಲೆ ಕಾದಿದೆ, ನಿಮ್ಮ ಪತ್ನಿ ಅವರಿಗೆ ಮತಹಾಕಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ, ಬಸವರಾಜ ದಡೇಸುಗೂರಗೆ ತಲೆಯಲ್ಲಿ ಮೆದುಳಿಲ್ಲ. ಮೆದುಳಿದ್ರೆ ಯಾವತ್ತಿಗೂ ರಾಜಕೀಯಕ್ಕೆ ಫ್ಯಾಮಿಲಿನ ತರಬಾರದು, ನನ್ನ ಪತ್ನಿ ಅವರಿಗೆ ಮತಹಾಕಿದ್ದಾರೆ ಅಂತ ಹಗುರವಾಗಿ ಮಾತನಾಡುತ್ತಾರೆ. ನಾನು ಅವರ ಕುಟಬದ ಬಗ್ಗೆ ಎಂದೂ ಮಾತಾಡಲಿಲ್ಲ‌. ನನ್ನ ಹೆಂಡತಿಗೆ ಈ ವಿಷಯಗೊತ್ತಾದ್ರೆ ಏನಾಗುತ್ತೇ? ೨೩ ವರ್ಷ ನಾನು ನನ್ನ ಪತ್ನಿ ಜೊತೆ ಸಂಸಾರ ಮಾಡಿದ್ದೀನಿ, ನನ್ನ ಪತ್ನಿ ಬಗ್ಗೆ ನನಗೆ ಗೊತ್ತಿಲ್ವಾ? ಯಾರದೇ ಸಂಸಾರದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ತಲೆಯಲ್ಲಿ ಮೆದುಳು ಇದೇನೋ, ಲದ್ದಿ ಇದೇನೋ ಗೊತ್ತಿಲ್ಲ ಅಂತ ದಡೇಸುಗೂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕರಡಿ ಸಂಗಣ್ಣ ಅವರು ರಾಜಶೇಖರ್ ಹಿಟ್ನಾಳ ಫ್ಯಾಮಿಲಿಯನ್ನು ಸೋಲಿಸುವುದಕ್ಕೆ ತಂಗಡಗಿ, ನಾನು ನಿಲ್ಲಲಿ ಅಂತ ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ ನಾವು ಪ್ರಾರ್ಥನೆ ಮಾಡಿದ್ದು ನಿಜ ! ಇವ್ರು ₹ ೧೫ ಲಕ್ಷ ಅಕೌಂಟಿಗೆ ಹಾಕಿಸಿಲ್ಲ. ಹೊಸ ಅಭ್ಯರ್ಥಿ ಬಂದ್ರೆ ೩೦ ಲಕ್ಷ ಹಾಕಿಸ್ತರಾ? ಮೊದಲು ಸಂಗಣ್ಣ ಅವರು ₹ ೧೫ ಲಕ್ಷ ಹಾಕಿಸಲಿ ಅನ್ನೋದಕ್ಕೆ ಪ್ರಾರ್ಥನೆ ಮಾಡಿದ್ದು, ಇನ್ನು ಪ್ರಾಮಾಣಿಕವಾಗಿ ನಾವು ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸೋ ಕೆಲಸ ಮಾಡುತ್ತೇವೆ ಅಂತ ಸಂಗಣ್ಣ ಅವರಿಗೆ ಟಾಂಗ್ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮುಖಂಡರಾದ ಕಾಟನ್ ಪಾಷಾ, ಮುತ್ತುರಾಜ್ ಕುಷ್ಟಗಿ, ಶಿವಕುಮಾರ್ ಶೆಟ್ಟರ್ ಉಪಸ್ಥಿತರಿದ್ದರು.

Please follow and like us:
error