ಬಿಜೆಪಿ ನಾಯಕರನ್ನು ಓಡಾಡಿಸಿ ಹೊಡೆಯುವ ಕಾಲ ಬಂದಿದೆ- ಶಿವರಾಜ್ ತಂಗಡಗಿ

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಎರಡು-ಮೂರು ದಿನಕ್ಕೊಮ್ಮೆ ಬಂದು ವಸೂಲಿ ಮಾಡ್ಕೊಂಡು ಹೋಗತಾರೆ ಎಂದು ಆರೋಪ

Koppal ಡಿಸೇಲ್ ಕಚ್ಚಾ ತೈಲ ಆವತ್ತು ಹೆಚ್ಚಿತ್ತು. ಇವತ್ತು ಕಡಿಮೆ ಇದೆ. ಆದರೂ ಬೆಲೆ ಹೆಚ್ಚಾಗ್ತಾ ಇದೆ.ನೀವು ಹೀಂಗೆ ಮಾಡಿದ್ರೆ, ಮೋದಿ ಭಕ್ತರಿಗೆ ಜನ ಅಟ್ಟಾಡಿಸಿ ಹೊಡೀತಾರೆ ಎಂದು ಮಾಜಿ ಸಚಿವ , ಡಿಸಿಸಿ ಅದ್ಯಕ್ಷ ಶಿವರಾಜ್ ತಂಗಡಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಸರ್ಕಲ್‌‌ನಲ್ಲಿ ನಿಂತು ಬೊಬ್ಬೆ ಹಾಕಿದವರು ಸ್ಮೃತಿ ಇರಾನಿ, ತಾರಾ, ಮಾಳವಿಕಾ ಮತ್ತು ಶಿಲ್ಪ ಗಣೇಶ್ ಮಾಯವಾಗಿದ್ದಾರೆ. ಮೋದಿ ಭಕ್ತರಿಗೆ, ಬಿಜೆಪಿ ಭಕ್ತರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ನಿರ್ಮಾಣ ಆಗಿವೆಯಾ ಎನ್ನುವ ಅನುಮಾನ ಕಾಡ್ತಿದೆ. ಸೂಲಿಬೆಲೆ ಫೇಸ್ ಬುಕ್ ನಲ್ಲಿ ಮೋದಿ ಪರವಾಗಿ ಭಾಷಣ ಬಿಗಿತಾರೆ. ಅವರು ಸೂಲಿಬೆಲೆ ಅಲ್ಲ, ಸುಳ್ಳಿನ ಬೆಲೆ ಅದು ಚಿನ್ನದ ರಸ್ತೆ ಮಾಡತಾರೆ, ಆಸ್ಪತ್ರೆಯಲ್ಲಿ ಏನೇನ್ ನಡಿತಿದೆ ಅಂತ ರಿಮೋಟ್ ಕಂಟ್ರೋಲ್ ನಲ್ಲೆ ನೋಡ್ತಾರೆ ಅಂದಿದ್ರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ಹಾಕ್ತಿದಾರೆ‌. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆ ಮಾಡ್ತಿವಿ. ಬಿಜೆಪಿಯವರಿಗೆ ನಾಚಿಕೆ, ಮಾನ ಮರ್ಯಾದೆ‌ ಇದೆಯಾ? ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಗೃಹಸಚಿವರ (ರಾಜನಾಥಸಿಂಗ್) ಮಾತು ನಿಜಾನಾ? ಮೋದಿ ಮಾತು ನಿಜನಾ? ಯಾರು ಸುಳ್ಳು ಹೇಳ್ತಿದಿರಿ ಹೇಳ್ರಿ ಸುಳ್ಳರಾ?

ಯಾರಾದರೂ ಚಿತ್ರನಟಿ ಸತ್ತರೆ 15 ನಿಮಿಷದಲ್ಲಿ ಟ್ವಿಟ್ ಮಾಡ್ತಾರೆ. ದೇಶದ ಯೋದರು ಸತ್ತು 24 ಗಂಟೆಯಾದರೂ ಪ್ರಧಾನಿಯಿಂದ ಟ್ವಿಟ್ ಇಲ್ಲ. ಅಮಿತ್ ಷಾ ತಾಕತ್ತಿದ್ದರೆ ಚರ್ಚೆಗೆ ಬನ್ನಿ ಅಂತ ಸವಾಲು ಹಾಕಿದಾರೆ. ಈ ಸವಾಲನ್ನ ಕಾಂಗ್ರೆಸ್ ಪಕ್ಷದ ಮುಖಂಡರಲ್ಲ, ಕಾರ್ಯಕರ್ತರೇ ಚರ್ಚೆಗೆ ಬರ್ತಾರೆ. ತಾಕತ್ತಿದ್ದರೆ ಬನ್ನಿ.

24 ತಾಸು ವಸೂಲಿಗೆ ನಿಂತಿರಿ. ಉಸ್ತುವಾರಿ ಸಚಿವರು ಸಭೆಯ ಹೆಸರಿನಲ್ಲಿ ವಸೂಲಿಗೆ ನಿಂತಿರಿ. ಸಮಾಂತರ ಜಲಾಶಯದ ವಿಚಾರದಲ್ಲಿ ಅನುಷ್ಠಾನಕ್ಕೆ ಪ್ರಯತ್ನಿಸಿದ್ದು ಕಾಂಗ್ರೆಸ್. ಈಗ ಅಧಿಕಾರದಲ್ಲಿ ಇದ್ದೇವೆ ಎನ್ನುವ ಕಾರಣಕ್ಕೆ ಫೋಟೊ ತೆಗೆಸಿಕೊಂಡು ನಾವೇ ಮಾಡಿದಿವಿ ಅಂತ ಹೇಳ್ಕೊಂಡ್ ತಿರುಗಾಡ್ತಾ ಇದ್ದಿರಿ. ಈ ಯೋಜನೆ ಬಗ್ಗೆ ಮಾಹಿತಿ, ಜ್ಞಾನ ಇದ್ದರೆ ಬನ್ನಿ ಚರ್ಚೆಗೆ.

ಬಿಜೆಪಿಯವರನ್ನು ಓಡಾಡಿಸಿಕೊಂಡು ಹೋಡಿತಾರೆ. ಭಂಡಗೆಟ್ಟವರು ಬಿಜೆಪಿಯವರು. ಕೆಲಸಕ್ಕೆ ಬಾರದವನು ಮೋದಿ ಎಂದು ಸೀರೆ ಉಡಿಸಿದ್ದ ಫೋಟೊ ಹಂಚಿದ್ದಕ್ಕೆ ಗಂಗಾವತಿಯಲ್ಲಿ ಯುವಕನೊಬ್ಬನನ್ನ ಜೈಲಿಗೆ ಹಾಕಿರಿ. ಹಿಂದಕ್ಕೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಸೋನಿಯಾಜಿ, ರಾಹುಲ್ ಜಿ, ನನಗೆ ಹೇಗೆ ಹೇಗೆ ಫೋಟೊ ಹಾಕ್ತಿದ್ದಿರಿ ನೆನಪು ಮಾಡಿಕೊಳ್ಳಿ.ಕೊರೊನಾ ಇದೆ ಎಂದು ಎಲ್ಲವನ್ನೂ ಬೆಲೆ ಹೆಚ್ಚಿಸ್ತಿದಿರಿ. ಜೊತೆಗೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರೋಕೆ ಹೊರಟಿದ್ದಿರಿ. ಕೊರೊನಾ ವಾರಿಯರ್ಸ್ ನಿಮಗೆ ಶಾಪ ಹಾಕಾಕತ್ತಾರ. ಮಾಧ್ಯಮದವರೇ ಕೇಂದ್ರದ ವಿರುದ್ಧ ಜಾಹಿರಾತು ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.  ಜಿಲ್ಲೆಯಲ್ಲಿ ಅಧಿಕಾರಿಗಳು ಎಲ್ಲ ವಸೂಲಿಗೆ ಇಳಿದಿದ್ದಾರೆ. ಪೊಲೀಸರನ್ನು ಹಚ್ಚಿ ವಸೂಲಿ ಮಾಡಿಸ್ತಾ ಇದ್ದಿರಿ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಎರಡು-ಮೂರು ದಿನಕ್ಕೊಮ್ಮೆ ಬಂದು ವಸೂಲಿ ಮಾಡ್ಕೊಂಡು ಹೋಗತಾರೆ ಎಂದು ಆರೋಪಿಸಿದರು

Please follow and like us:
error