ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಫೋಟೋ ಇರುವ ಸಾವಿರಾರು ಸೀರೆಗಳ ವಶ

ಮಂಡ್ಯ, ನ.19: ಕೆ.ಆರ್.ಪೇಟೆ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಫೋಟೋ ಇರುವ ಸಾವಿರಾರು ಸೀರೆಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಸಾಕ್ಷಿಬೀಡು ಗ್ರಾಮದ ಬಳಿ (ಕೆ.ಎ.05, ಎಂ.ಇ.0599) ಮಾರುತಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಚುನಾವಣಾ ತಪಾಸಣಾಧಿಕಾರಿ ಅಶೋಕ್ ನೇತೃತ್ವದ ಅಧಿಕಾರಿಗಳು ವಶಪಡಿಕೊಂಡಿದ್ದಾರೆ.

ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಶಿವಕುಮಾರ್ ಯಾದವ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Please follow and like us:

Related posts